ನಮ್ಮ ಬಗ್ಗೆ
ಜಗತ್ತು ಉತ್ತಮದೆಡೆಗೆ ಸಾಗುವ ವಿಧಾನವನ್ನು ನಾವು ಮರುಕಲ್ಪಿಸುತ್ತೇವೆ.
ಚಲನೆಗೆ ಶಕ್ತಿ ನೀಡುವುದೇ ನಮ್ಮ ಕೆಲಸ. ಅದು ನಮ್ಮ ಜೀವಾಳ. ಅದು ನಮ್ಮ ನರನಾಡಿಗಳಲ್ಲಿ ಹರಿಯುತ್ತಿದೆ. ಪ್ರತಿದಿನವೂ ಕೆಲಸ ಮಾಡಲು ಅದು ನಮಗೆ ಪ್ರೇರಣೆಯಾಗಿದೆ. ನಾವು ಹೇಗೆ ಚಾಲನೆಯನ್ನು ಉತ್ತಮವಾಗಿಸಬಹುದು ಎಂಬುದನ್ನು ಸದಾ ಮರುಕಲ್ಪಿಸುತ್ತಿರಲು ಅದು ನಮ್ಮನ್ನು ಪ್ರೇರೇಪಿಸುತ್ತದೆ. ನಿಮಗಾಗಿ. ನೀವು ಪ್ರಯಾಣಿಸಲು ಬಯಸುವ ಎಲ್ಲಾ ಸ್ಥಳಗಳಿಗೆ. ನೀವು ಪಡೆಯಲು ಬಯಸುವ ಎಲ್ಲಾ ವಸ್ತುಗಳಿಗಾಗಿ. ನೀವು ಗಳಿಸಲು ಬಯಸುವ ಎಲ್ಲಾ ವಿಧಾನಗಳಿಗಾಗಿ. ಪ್ರಪಂಚದಾದ್ಯಂತ. ನೈಜ ಸಮಯದಲ್ಲಿ. ಈಗಿನ ನಂಬಲಾಗದ ವೇಗದಲ್ಲಿ.
ನಮ್ಮ ಸಿಇಒ ಅವರ ಪತ್ರ
ನಮ್ಮ ಜಾಗತಿಕ ಪ್ಲಾಟ್ಫಾರ್ಮ್ನಲ್ಲಿ ಪ್ರತಿಯೊಬ್ಬರಿಗೂ ಮುಂದಕ್ಕೆ ಸಾಗಲು ಸಹಾಯ ಮಾಡುವ ತಂತ್ರಜ್ಞಾನವನ್ನು ಒದಗಿಸುವ ನಮ್ಮ ತಂಡದ ಬದ್ಧತೆಯ ಬಗ್ಗೆ ಓದಿ.
ಸುಸ್ಥಿರತೆ
ಸಾರ್ವಜನಿಕ ಸಾರಿಗೆಯಲ್ಲಿ, ಅಥವಾ ಮೈಕ್ರೋಮೊಬಿಲಿಟಿಯ ಮೂಲಕ ಹೊಗೆರಹಿತ ವಾಹನಗಳಲ್ಲಿ 100% ರಷ್ಟು ಸವಾರಿ ಕೈಗೊಳ್ಳುವುದರೊಂದಿಗೆ, 2040 ರ ವೇಳೆಗೆ ಸಂಪೂರ್ಣ ವಿದ್ಯುತ್ ಚಾಲಿತ, ಹೊಗೆರಹಿತ ವಾಹನಗಳ ಪ್ಲಾಟ್ಫಾರ್ಮ್ ಆಗಲು Uber ಬದ್ಧವಾಗಿದೆ. ವಿಶ್ವದ ಅತಿದೊಡ್ಡ ಮೊಬಿಲಿಟಿ ಪ್ಲಾಟ್ಫಾರ್ಮ್ ಆಗಿ ಹವಾಮಾನ ಬದಲಾವಣೆಯ ಸವಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸವಾರರಿಗೆ ಪರಿಸರ-ಸ್ನೇಹಿ ಸವಾರಿ ಮಾಡಲು ಇನ್ನಷ್ಟು ವಿಧಾನಗಳನ್ನು ಒದಗಿಸುವ ಮೂಲಕ, ಚಾಲಕರಿಗೆ ವಿದ್ಯುತ್ ಚಾಲಿತ ವಾಹನಗಳನ್ನು ಹೊಂದಲು ನೆರವು ನೀಡುವ ಮೂಲಕ, ಪಾರದರ್ಶಕತೆಯನ್ನು ಆದ್ಯತೆಯನ್ನಾಗಿ ಮಾಡುವ ಮೂಲಕ ಮತ್ತು ಸ್ವಚ್ಛ ಮತ್ತು ನ್ಯಾಯಯುತ ಇಂಧನ ಪರಿವರ್ತನೆಯನ್ನು ತ್ವರಿತಗೊಳಿಸಲು ಎನ್ಜಿಒಗಳು ಮತ್ತು ಖಾಸಗಿ ವಲಯದೊಂದಿಗೆ ಸಹಭಾಗಿತ್ವ ನಡೆಸುವ ಮೂಲಕ ನಾವು ಇದನ್ನು ಸಾಧಿಸುತ್ತೇವೆ.
ಸವಾರಿಗಳು ಮತ್ತು ಅದರಾಚೆಗೆ
ಸ್ಥಳ A ಯಿಂದ ಸ್ಥಳ B ಗೆ ಹೋಗಲು ಸವಾರರಿಗೆ ಒಂದು ವಿಧಾನವನ್ನು ಹುಡುಕುವುದರ ಜೊತೆಗೆ, ನಾವು ಜನರಿಗೆ ತ್ವರಿತವಾಗಿ ಮತ್ತು ಕೈಗೆಟುಕುವ ದರದಲ್ಲಿ ಆಹಾರವನ್ನು ಆರ್ಡರ್ ಮಾಡಲು, ಆರೋಗ್ಯರಕ್ಷಣೆಗೆ ಇರುವ ಅಡೆತಡೆಗಳನ್ನು ನಿವಾರಿಸಲು, ಹೊಸ ಸರಕು-ಬುಕಿಂಗ್ ಪರಿಹಾರಗಳನ್ನು ರಚಿಸಲು ಮತ್ತು ಕಂಪನಿಗಳಿಗೆ ತಮ್ಮ ಉದ್ಯೋಗಿಗಳಿಗೆ ತಡೆರಹಿತ ಪ್ರಯಾಣದ ಅನುಭವವನ್ನು ಒದಗಿಸಲು ಸಹಾಯ ಮಾಡುತ್ತಿದ್ದೇವೆ. ಮತ್ತು ಯಾವಾಗಲೂ ಚಾಲಕರು ಮತ್ತು ಕೊರಿಯರ್ಗಳಿಗೆ ಆದಾಯ ಗಳಿಸಲು ಸಹಾಯ ಮಾಡುತ್ತೇವೆ.
ನಿಮ್ಮ ಸುರಕ್ಷತೆ ನಮ್ಮನ್ನು ಪ್ರೇರೇಪಿಸುತ್ತದೆ
ನೀವು ಹಿಂಬದಿಯ ಆಸನದಲ್ಲಿ ಅಥವಾ ಮುಂಬದಿ ಸವಾರನ ಆಸನದಲ್ಲಿರಿ, ನಿಮ್ಮ ಸುರಕ್ಷತೆ ಅತಿಮುಖ್ಯ. ನಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಾವು ಬದ್ಧರಾಗಿದ್ದೇವೆ ಮತ್ತು ತಂತ್ರಜ್ಞಾನವು ನಮ್ಮ ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ. ನಾವು ಸುರಕ್ಷತೆಯ ಹರಿಕಾರರೊಂದಿಗೆ ಜತೆಗೂಡಿ ಸುರಕ್ಷತೆಯನ್ನು ಸುಧಾರಿಸಲು ಮತ್ತು ಪ್ರತಿಯೊಬ್ಬರಿಗೂ ಸುಲಭ ಸಂಚಾರ ಸೇವೆಯನ್ನು ಒದಗಿಸಲು ಹೊಸ ತಂತ್ರಜ್ಞಾನಗಳು ಹಾಗೂ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತೇವೆ.
ಕಂಪನಿಯ ಮಾಹಿತಿ
ಸವಾರರು, ಚಾಲಕರು ಮತ್ತು ಉದ್ಯೋಗಿಗಳಿಗೆ ಸೂಕ್ತವಾದುದನ್ನು ಮಾಡುವುದಕ್ಕೆ ಒತ್ತು ನೀಡುವ ಸಂಸ್ಕೃತಿಯನ್ನು ನಾವು Uber ನಲ್ಲಿ ನಿರ್ಮಿಸುತ್ತಿದ್ದೇವೆ. ಮುನ್ನಡೆಸುತ್ತಿರುವ ತಂಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಕಂಪನಿಯಲ್ಲಿ ಅತ್ಯುನ್ನತ ಮಟ್ಟದಲ್ಲಿ ನಿಷ್ಠೆಗೆ ನಮ್ಮ ಬದ್ ಧತೆಯನ್ನು Uber ನ ನೈತಿಕತೆ ಮತ್ತು ಅನುಸರಣೆ ಪ್ರೋಗ್ರಾಂ ಚಾರ್ಟರ್ ವಿವರಿಸುತ್ತದೆ. ನೈತಿಕ ಸಂಸ್ಕೃತಿಗೆ ಪಾರದರ್ಶಕತೆಯು ನಿರ್ಣಾಯಕವಾಗಿದೆ; ನಮ್ಮ ಇಂಟೆಗ್ರಿಟಿ ಸಹಾಯವಾಣಿ ಮತ್ತು ಪರಿಣಾಮಕಾರಿ ಹಾಗೂ ಇನ್ನಷ್ಟು ಹೆಚ್ಚಿಸಬಹುದಾದ ಅನುಸರಣೆ ಉಪಕ್ರಮಗಳ ಮೂಲಕ ನಾವು ಇದನ್ನು ಸಾಧಿಸುತ್ತೇವೆ.
ಇತ್ತೀಚಿನ ಸುದ್ದಿಗಳ ಮಾಹಿತಿ ಪಡೆಯುತ್ತಿರಿ
ನಿಮ್ಮ ಸುತ್ತಲಿನ ಮತ್ತು ಜಗತ್ತಿನಾದ್ಯಂತದ ಪಾಲುದಾರಿಕೆಗಳು, ಆ್ಯಪ್ ಪರಿಷ್ಕರಣೆಗಳು, ಉಪಕ್ರಮಗಳು ಮತ್ತು ಇನ್ನಷ್ಟು ಸಂಗತಿಗಳ ಬಗ್ಗೆ ಪ್ರಕಟಣೆಗಳನ್ನು ಪಡೆಯಿರಿ.
ಅನ್ವೇಷಿಸಲು ಹೊಸ ಸ್ಥಳಗಳನ್ನು ಹುಡುಕಿ ಮತ್ತು Uber ಉತ್ಪನ್ನಗಳು, ಪಾಲುದಾರಿಕೆಗಳು ಮತ್ತು ಇನ್ನಷ್ಟರ ಕುರಿತು ತಿಳಿಯಿರಿ.
ವಿತ್ತೀಯ ವರದಿಗಳನ್ನು ಡೌನ್ಲೋಡ್ ಮಾಡಿ, ಮುಂದಿನ ತ್ರೈಮಾಸಿಕದ ಯೋಜನೆಗಳನ್ನು ನೋಡಿ ಮತ್ತು ನಮ್ಮ ಸಾಂಸ್ಥಿಕ ಜವಾಬ್ದಾರಿ ಉಪಕ್ರಮಗಳ ಬಗ್ಗೆ ಓದಿ.