Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಟಿಪ್ ನೀಡುವುದು

ಉತ್ತಮ ಸೇವೆ ಪ್ರತಿಫಲ ಪಡೆಯಲು ಅರ್ಹವಾಗಿದೆ. ಸವಾರರು ಪ್ರತಿ ಟ್ರಿಪ್ ಮುಗಿದ ಬಳಿಕ ಆ್ಯಪ್‌ನಿಂದಲೇ ನೇರವಾಗಿ ಟಿಪ್ಸ್ ನೀಡುವ ಆಯ್ಕೆಯನ್ನು ಹೊಂದಿದ್ದಾರೆ.

ಡ್ರೈವರ್ ಆ್ಯಪ್ ಮೂಲಕ ನೇರವಾಗಿ ಟಿಪ್ಸ್ ಸ್ವೀಕರಿಸುವುದು ತುಂಬಾ ಸುಲಭ.

ಯಾವಾಗಲೂ, ಶೂನ್ಯ ಸೇವಾ ಶುಲ್ಕಗಳು ಅನ್ವಯವಾಗುತ್ತವೆ.

ತ್ವರಿತ ಪಾವತಿಯೊಂದಿಗೆ ಯಾವುದೇ ಸಮಯದಲ್ಲಿ ಟಿಪ್ಸ್ ಮತ್ತು ಗಳಿಕೆಗಳನ್ನು ಕ್ಯಾಶ್ಔಟ್ ಮಾಡಿ.

ಅದು ಹೇಗೆ ಕಾರ್ಯನಿರ್ವಹಿಸುತ್ತದೆ

ನಿಮ್ಮ ನಗರದಲ್ಲಿ ಟಿಪ್ಸ್ ನೀಡುವ ಸೇವೆಯು ಲಭ್ಯವಾದ ಕೂಡಲೇ, ನಿಮ್ಮ ಡ್ರೈವರ್ ಆ್ಯಪ್‌ನಲ್ಲಿ ಮತ್ತು ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸವಾರರಿಂದ ಟಿಪ್ಸ್ ಸ್ವೀಕರಿಸುವುದನ್ನು ಪ್ರಾರಂಭಿಸಲು: 1) ಡ್ರೈವರ್ ಆ್ಯಪ್ ನ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಅಥವಾ ಡೌನ್‌ಲೋಡ್ ಮಾಡಿ, 2) ನಿಮ್ಮ ಆ್ಯಪ್ ಮುಚ್ಚಿ ಮತ್ತು ಮರುಪ್ರಾರಂಭಿಸಿ, 3) ಟಿಪ್ಸ್ ಸ್ವೀಕರಿಸು ಟ್ಯಾಪ್ ಮಾಡಿ.

ಸವಾರರು ಟ್ರಿಪ್ ಮುಗಿದ ಬಳಿಕ ರೇಟಿಂಗ್ ಮಾಡುವಾಗ ಟಿಪ್ಸ್ ಸೇರಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಸವಾರರು ಪ್ರೀಸೆಟ್ ಟಿಪ್ಸ್ ಮೊತ್ತಗಳಿಂದ ಸುಲಭವಾಗಿ ಆಯ್ಕೆ ಮಾಡಬಹುದು.

ಅಥವಾ ಸವಾರರು ಕಸ್ಟಮ್ ಟಿಪ್ಸ್ ಮೊತ್ತವನ್ನು ಆಯ್ಕೆ ಮಾಡಬಹುದು.

ಟ್ರಿಪ್ ವಿವರಗಳಲ್ಲಿ ಪ್ರತಿ ಟ್ರಿಪ್‌ಗೆ ನಿಗದಿಪಡಿಸಿರುವ ನಿಖರವಾದ ಟಿಪ್ಸ್ ಮೊತ್ತವನ್ನು ನೀವು ನೋಡಬಹುದು.

ನಿಮ್ಮ ಟ್ರಿಪ್ ಇತಿಹಾಸದಲ್ಲಿ ನಿಮ್ಮ ಎಲ್ಲಾ ಟಿಪ್ಸ್ ವಿವರಗಳನ್ನು ನೋಡಬಹುದು.

ನಿಮ್ಮ ವಾರದ ಸಾರಾಂಶಗಳು ವಿವರಗಳಲ್ಲಿ ಒಟ್ಟು ಟಿಪ್ಸ್ ಅನ್ನು ನೀವು ನೋಡಬಹುದು. ನಿಮ್ಮ ಇತರ ಗಳಿಕೆಯಂತೆ ತ್ವರಿತ ಪಾವತಿ ಬಳಸಿ ಯಾವುದೇ ಸಮಯದಲ್ಲಿ ಟಿಪ್ಸ್ ಹಣವನ್ನು ಕ್ಯಾಶ್ಔಟ್ ಮಾಡಬಹುದು.

ಟ್ರಿಪ್ ಮುಗಿದ ಬಳಿಕ, ಸವಾರರಿಗೆ ಟಿಪ್ಸ್ ನೀಡಲು 30 ದಿನಗಳ ಕಾಲಾವಕಾಶವಿರುತ್ತದೆ. ನೀವು ಆನ್‌ಲೈನ್‌ಗೆ ಹೋದಾಗ, ನೀವು ಡ್ರೈವರ್ ಆ್ಯಪ್ ಅನ್ನು ಕೊನೆಯ ಬಾರಿಗೆ ತೆರೆದ ನಂತರ ನೀವು ಸ್ವೀಕರಿಸಿದ ಯಾವುದೇ ಹೊಸ ಟಿಪ್ಸ್ ಅನ್ನು ನೀವು ನೋಡುತ್ತೀರಿ.

ಆಗಾಗ ಕೇಳಲಾಗುವ ಪ್ರಶ್ನೆಗಳು

  • ನಿಮ್ಮ ನಗರದಲ್ಲಿ ಟಿಪ್ಸ್ ನೀಡುವಿಕೆಯು ಲಭ್ಯವಾದ ಕೂಡಲೇ, ನಿಮಗೆ ಆ್ಯಪ್‌ನಲ್ಲಿ ಮತ್ತು ಇಮೇಲ್ ಮೂಲಕ ತಿಳಿಸಲಾಗುತ್ತದೆ. ಸವಾರರಿಂದ ಟಿಪ್ಸ್ ಸ್ವೀಕರಿಸುವುದನ್ನು ಪ್ರಾರಂಭಿಸಲು: 1) ಡ್ರೈವರ್ ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಅಥವಾ ಡೌನ್‌ಲೋಡ್ ಮಾಡಿ, 2) ನಿಮ್ಮ ಆ್ಯಪ್ ಮುಚ್ಚಿ ಮರುಪ್ರಾರಂಭಿಸಿರುವುದನ್ನು ಖಚಿತಪಡಿಸಿ ಮತ್ತು 3) ಟಿಪ್ಸ್ ಸ್ವೀಕರಿಸು ಟ್ಯಾಪ್ ಮಾಡಿ.

  • ಟಿಪ್ಸ್ ಮೊತ್ತವು ನಿಮಗೆ ಸೇರಿದ್ದು ಮತ್ತು ಆ ಮೊತ್ತವನ್ನು ನಿಮ್ಮ ಒಟ್ಟಾರೆ ಗಳಿಕೆಗೆ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ನಿಮ್ಮ ಟಿಪ್ಸ್ ಮೊತ್ತಕ್ಕೆ ಯಾವುದೇ ಸೇವಾ ಶುಲ್ಕಗಳಿರುವುದಿಲ್ಲ. ನೀವು Xchange ಗುತ್ತಿಗೆ ಅಥವಾ ಫ್ಯುಯಲ್‌ಕಾರ್ಡ್ ರೀತಿಯ ಸೇವೆಗಳಿಗೆ ನಿಮ್ಮ ಗಳಿಕೆಗಳಿಂದ ಹಣ ಪಾವತಿಸಲು ಈ ಹಿಂದೆ ಒಪ್ಪಿಗೆ ಸೂಚಿಸಿದ್ದರೆ, ಅಂತಹ ಪಾವತಿಗಳನ್ನು ಮಾಡಲು ನಿಮ್ಮ ಒಟ್ಟಾರೆ ಗಳಿಕೆಗಳ ಭಾಗವಾಗಿ ನಿಮ್ಮ ಟಿಪ್ಸ್ ಅನ್ನು ಸಹ ಬಳಸಬಹುದಾಗಿದೆ.

  • UberX, UberPool, Uber Black, Uber SUV, uberTAXI, Uber Select, UberXL, WAV, Assist, Uber Hop ಮತ್ತು Uber Commute ಸೇರಿದಂತೆ, Uber ಟ್ರಿಪ್‌ಗಳಲ್ಲಿ ಟಿಪ್ಸ್ ಅನ್ನು ನೀವು ಸ್ವೀಕರಿಸಬಹುದು.

  • ರೇಟಿಂಗ್‌ಗಳು ಟಿಪ್ಸ್ ಮೇಲೆ ಪರಿಣಾಮ 'ಬೀರುವುದಿಲ್ಲ ಮತ್ತು ಟಿಪ್ಸ್ 5-ಸ್ಟಾರ್ ರೇಟಿಂಗ್‌ಗಳಿಗೆ 'ಸಂಬಂಧಿಸಿರುವುದಿಲ್ಲ. ಆದಾಗ್ಯೂ, Uber ಸವಾರರು ಟಿಪ್ಸ್ ಸೇರಿಸುವ ಮೊದಲು ತಮ್ಮ ಟ್ರಿಪ್ ಕುರಿತು ರೇಟಿಂಗ್ ನೀಡಬೇಕು.

  • ನೀವು ಡ್ರೈವರ್ ಆ್ಯಪ್‌ನ ಹೋಮ್ ಫೀಡ್‌ನಲ್ಲಿನ ಅಧಿಸೂಚನೆಯಿಂದ ನೀವು ಆಯ್ಕೆ ಮಾಡಬಹುದು.

  • ನಿಮ್ಮ ಟಿಪ್ಸ್ ಮೇಲೆ ಯಾವುದೇ ಸೇವಾ ಶುಲ್ಕಗಳನ್ನು ವಿಧಿಸುವುದಿಲ್ಲ.

  • ಡ್ರೈವರ್ ಆ್ಯಪ್‌ನ ಗಳಿಕೆಗಳು ವಿಭಾಗದಲ್ಲಿ ಮತ್ತು drivers.uber.com ನಲ್ಲಿ ನಿಮ್ಮ ಟಿಪ್ಸ್ ವಿವರಗಳನ್ನು ಟ್ರ್ಯಾಕ್ ಮಾಡಿ. ನಿಮ್ಮ ಸಾಪ್ತಾಹಿಕ ಸ್ಟೇಟ್‌ಮೆಂಟ್, ವಹಿವಾಟು ಚಟುವಟಿಕೆ ಮತ್ತು ದೈನಂದಿನ/ಸಾಪ್ತಾಹಿಕ ಗಳಿಕೆಯ ಸಾರಾಂಶಗಳಲ್ಲಿಯೂ ಸಹ ಟಿಪ್ಸ್ ವಿವರಗಳನ್ನು ತೋರಿಸಲಾಗುತ್ತದೆ. ಟ್ರಿಪ್ ಪೂರ್ಣಗೊಂಡ ನಂತರ 30 ದಿನಗಳವರೆಗೂ ಸವಾರರು ಟಿಪ್ಸ್ ನೀಡಬಹುದು. Uber Eats ನಲ್ಲಿ, ಗ್ರಾಹಕರು ಟ್ರಿಪ್ ಮುಗಿದ 7 ದಿನಗಳವರೆಗೆ ಟಿಪ್ಸ್ ಸೇರಿಸಬಹುದು.

  • ನಿಮಗೆ ಟಿಪ್ಸ್ ಪಡೆದುಕೊಂಡ ಕೂಡಲೇ ಲಭ್ಯವಾಗುತ್ತದೆ.

  • ಸವಾರರು ಆ್ಯಪ್‌ನಲ್ಲಿ ಟಿಪ್ಸ್ ನೀಡಲು ಪ್ರಾರಂಭಿಸಬೇಕಾದರೆ, ಇತ್ತೀಚಿನ ಆ್ಯಪ್ ಆವೃತ್ತಿಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಟಿಪ್ಸ್ ನೀಡಲು ಪ್ರಾರಂಭಿಸುವ ಸಲುವಾಗಿ ಆ್ಯಪ್ ಅನ್ನು ಅಪ್‌ಗ್ರೇಡ್ ಮಾಡಬೇಕಾಗುತ್ತದೆ ಎಂಬುದಾಗಿ ಎಲ್ಲಾ ಸವಾರರಿಗೆ ಇಮೇಲ್ ಮೂಲಕ ತಿಳಿಸಲಾಗುತ್ತದೆ.

  • Uber ಆ್ಯಪ್ ಜೊತೆಗೆ ಚಾಲನೆ ಮಾಡುವ ಕೆಲವು ವ್ಯಕ್ತಿಗಳು ತಮ್ಮ ಗಳಿಕೆಗಳನ್ನು Uber ನ ವ್ಯವಹಾರದ ಪಾರ್ಟ್‌ನರ್‌ಗಳು ಒದಗಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಪಾವತಿಸಲು ಒಪ್ಪುತ್ತಾರೆ. XChange ಗುತ್ತಿಗೆ, ಎಂಟರ್‌ಪ್ರೈಸ್, ಅಥವಾ ಫ್ಯುಯಲ್‌ಕಾರ್ಡ್‌ನಂತಹ ಪಾಲುದಾರರಿಗೆ ಪಾವತಿಗಳನ್ನು ಮಾಡಲು ನೀವು ಒಪ್ಪಿದರೆ, ಆ ಪಾವತಿಗಳನ್ನು ಮಾಡಲು ನಿಮ್ಮ ಟಿಪ್ಸ್ ಅನ್ನು ನಿಮ್ಮ ಒಟ್ಟು ಗಳಿಕೆಯಿಂದ ಕಡಿತಗೊಳಿಸಬಹುದು. ಟಿಪ್ಸ್ ಸ್ವೀಕರಿಸಲು ಮತ್ತು ಈ ಪಾವತಿಗಳನ್ನು ಮಾಡಲು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಅಥವಾ ಟಿಪ್ಸ್ ಮೊತ್ತವನ್ನು ಪ್ರತ್ಯೇಕವಾಗಿ ನಗದು ರೂಪದಲ್ಲಿ ಸ್ವೀಕರಿಸುವುದನ್ನು ಮುಂದುವರಿಸಲು ಚಾಲಕರಿಗೆ ಆಯ್ಕೆ ನೀಡುತ್ತದೆ.

  • ಇಲ್ಲ, ಸವಾರರು ತಮ್ಮ ಚಾಲಕರಿಗೆ ಟಿಪ್ಸ್ ಕೊಡಬೇಕಾದ ಅಗತ್ಯವಿಲ್ಲ.

  • ನಿಮ್ಮ ಟ್ರಿಪ್ ಮುಗಿದ ನಂತರ 30 ದಿನಗಳವರೆಗೆ ನಿಮ್ಮ ಸವಾರರು ಟಿಪ್ಸ್ ನೀಡಬಹುದು. ಸವಾರರು ತಮ್ಮ ಟ್ರಿಪ್ ಇತಿಹಾಸ, help.uber.com, riders.uber.com ಅಥವಾ ತಮ್ಮ ಇಮೇಲ್ ಸ್ವೀಕೃತಿಗಳಿಗೆ ಹೋಗಿ, ತಮ್ಮ ಹಿಂದಿನ ಟ್ರಿಪ್‌ನ ಚಾಲಕರಿಗೆ ಟಿಪ್ಸ್ ನೀಡಬಹುದು.

  • ನಿಮ್ಮ ಸವಾರರ ಗೌಪ್ಯತೆಯನ್ನು ರಕ್ಷಿಸಲು, ನಿಮಗೆ ನೀಡುವ ಟಿಪ್ಸ್ ಮಾಹಿತಿಯನ್ನು ನೀವು ಟ್ರಿಪ್ ರಸೀತಿಯಲ್ಲಿ ನೋಡಬಹುದಾದರೂ ಸವಾರರ ಹೆಸರು ಅಥವಾ ಫೋಟೋವನ್ನು ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

  • ನೀವು ಫ್ಲೀಟ್‌ಗಾಗಿ ಚಾಲನೆ ಮಾಡಿದರೆ, ನಿಮ್ಮ ಗಳಿಕೆಯ ಸ್ಟೇಟ್‌ಮೆಂಟ್‌ಗಳನ್ನು ನೋಡಿದ ನಂತರ ನಿಮಗೆ ನೀಡಬೇಕಾದ ಯಾವುದೇ ಟಿಪ್ಸ್ ಅನ್ನು ಪಾವತಿಸಲು ಫ್ಲೀಟ್ ಮಾಲೀಕರು ಜವಾಬ್ದಾರರಾಗಿರುತ್ತಾರೆ.

  • help.uber.com ಗೆ ಭೇಟಿ ನೀಡಿ.