Please enable Javascript
Skip to main content

ಎಲ್ಲರಿಗೂ ಸುರಕ್ಷತೆ ಮತ್ತು ಗೌರವ

Uber'ನ ಸಮುದಾಯ ಮಾರ್ಗಸೂಚಿಗಳು  

 

ಪ್ರತಿ ಅನುಭವವನ್ನು ಸುರಕ್ಷಿತ, ಗೌರವಾನ್ವಿತ ಮತ್ತು ಸಕಾರಾತ್ಮಕ ಭಾವನೆಯನ್ನು ಮೂಡಿಸಲು ನಮ್ಮ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಚಾಲಕರು, ಸವಾರರು, ಡೆಲಿವರಿ ಪಾರ್ಟ್ನರ್‌ಗಳು, Uber Eats ಬಳಕೆದಾರರು, ವ್ಯಾಪಾರಿಗಳು ಮತ್ತು ಯಾವುದೇ Uber ಉತ್ಪನ್ನಗಳನ್ನು ಬಳಸುವ ವ್ಯಾಪಾರಗಳನ್ನು ಒಳಗೊಂಡಂತೆ ಆದರೆ ಅದಷ್ಟಕ್ಕೇ ಸೀಮಿತವಾಗಿರದೆ, ನಮ್ಮ ಎಲ್ಲ ಅಪ್ಲಿಕೇಶನ್‌ಗಳಲ್ಲಿ Uber ಖಾತೆಗೆ ಸೈನ್ ಅಪ್ ಮಾಡುವ ಪ್ರತಿಯೊಬ್ಬರೂ ನ್ಯಾಯವ್ಯಾಪ್ತಿಗೆ ಅನ್ವಯವಾಗುವಂತೆ, ಮಾರ್ಗಸೂಚಿಗಳನ್ನು ಅನುಸರಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ. ಗ್ರೀನ್‌ಲೈಟ್ ಕೇಂದ್ರ, ಆನ್‌ಲೈನ್ ವ್ಯವಸ್ಥೆಗಳ ಮೂಲಕ ಅಥವಾ ಫೋನ್ ಮೂಲಕ Uber ಉದ್ಯೋಗಿಗಳು ಮತ್ತು ಗುತ್ತಿಗೆದಾರರ ಜೊತೆಗೆ ನಡೆಸುವ ಸಂವಾದಕ್ಕೂ ಅವು ಅನ್ವಯಿಸುತ್ತವೆ.

ಈ ವಿಭಾಗದಲ್ಲಿನ ಮಾರ್ಗಸೂಚಿಗಳು ಪ್ರತಿ ಅನುಭವದ ಸಮಯದಲ್ಲಿ ನಮ್ಮ ವೈವಿಧ್ಯಮಯ ಸಮುದಾಯದೊಳಗೆ ಸಕಾರಾತ್ಮಕ ಸಂವಹನಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.

ಪ್ರತಿಯೊಬ್ಬರಿಗೂ ಸುರಕ್ಷಿತ ಅನುಭವಗಳನ್ನು ಸೃಷ್ಟಿಸಲು ಸಹಾಯ ಮಾಡಲೆಂದು ನಮ್ಮ ತಂಡವು ಪ್ರತಿದಿನ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಈ ಮಾನದಂಡಗಳನ್ನು ರಚಿಸಲಾಗಿದೆ.

ನಾವು ಕಾನೂನು ನಿಯಮಗಳನ್ನು ಅನುಸರಿಸಲು ಬದ್ಧರಾಗಿದ್ದೇವೆ. ನಮ್ಮ ಆ್ಯಪ್‌ಗಳನ್ನು ಬಳಸುವ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಮತ್ತು ಅನ್ವಯವಾಗುವ ಕಾನೂನು ಮತ್ತು ನಿಬಂಧನೆಗಳಿಗೆ ಬದ್ಧರಾಗುತ್ತಾರೆ ಎಂಬುದಾಗಿ ನಾವು ನಿರೀಕ್ಷಿಸುತ್ತೇವೆ.

ನಿಮ್ಮ ಆಯ್ಕೆಗಳ ಸಾಮರ್ಥ್ಯ

ಪ್ರತಿದಿನ ಲಕ್ಷಾಂತರ ಜನರು Uber ಜೊತೆಗೆ ಉತ್ತಮ ಅನುಭವಗಳನ್ನು ಹೊಂದಿದ್ದಾರೆ. ಈ ಸಕಾರಾತ್ಮಕ ಸಂವಹನಗಳು ನಾವು ಯಾರು ಎಂಬುದರ ಕುರಿತು ವಿವರಿಸಲು ಸಹಾಯ ಮಾಡುತ್ತದೆ. Uber ಅನ್ನು ಸುರಕ್ಷಿತ ಮತ್ತು ಸ್ವಾಗತಾರ್ಹ ಸಮುದಾಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡಲೆಂದು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು.

ನಿಮ್ಮ ಅಭಿಪ್ರಾಯವು ತುಂಬಾ ಮುಖ್ಯ

ಯಾವುದೇ ಘಟನೆಗಳು ಅಂದರೆ, ಒಳ್ಳೆಯದು ಅಥವಾ ಕೆಟ್ಟ ಘಟನೆಗಳು ಎದುರಾದಲ್ಲಿ, ಆ ಕುರಿತು ನಮಗೆ ತಿಳಿಸುವ ಪ್ರಕ್ರಿಯೆಯನ್ನು ನಾವು ಸುಲಭಗೊಳಿಸುತ್ತೇವೆ. ನಮ್ಮ ತಂಡವು ನಮ್ಮ ಮಾನದಂಡಗಳನ್ನು ನಿರಂತರವಾಗಿ ಸುಧಾರಿಸುತ್ತಿದೆ ಮತ್ತು ನಿಮ್ಮ ಅಭಿಪ್ರಾಯ ಮುಖ್ಯವಾಗಿದ್ದು ಇದರಿಂದ ನಾವು ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಮತ್ತು ನಮ್ಮ ತಂತ್ರಜ್ಞಾನವು ವಿಕಸನಗೊಳ್ಳುತ್ತಿದ್ದಂತೆ ನಮ್ಮ ಮಾನದಂಡಗಳನ್ನು ನಿಮಗೆ ಪ್ರಸ್ತುತವಾಗಿರಿಸಬಹುದು.

ನೀವು ಘಟನೆಯ ಕುರಿತು ವರದಿ ಮಾಡಲು ಬಯಸಿದರೆ, ನಮ್ಮ ಆ್ಯಪ್ ಮೂಲಕ ನಮಗೆ ಕರೆ ಮಾಡಿ ಅಥವಾ help.uber.com ಗೆ ಭೇಟಿ ನೀಡಿ. ನೀವು ಅಪಾಯದಲ್ಲಿ ಸಿಲುಕಿದ್ದರೆ, Uber ಗೆ ತಿಳಿಸುವುದಕ್ಕೂ ಮೊದಲು ನಿಮ್ಮ ಸ್ಥಳೀಯ ಪ್ರಾಧಿಕಾರಗಳ ಗಮನಕ್ಕೆ ತನ್ನಿ.

ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂಬುದಾಗಿ ನಿಮ್ಮ ಅಧಿಕ ರೇಟಿಂಗ್ ಹೇಳುತ್ತದೆ. ನಿಮ್ಮ ರೇಟಿಂಗ್ ಸರಾಸರಿಯು ನಿಮ್ಮ ನಗರದ ಸರಾಸರಿಗಿಂತ ಕಡಿಮೆಯಿದ್ದರೆ, ಅದನ್ನು ಸುಧಾರಿಸುವುದು ಹೇಗೆಂದು ನಾವು ನಿಮಗೆ ತಿಳಿಸುತ್ತೇವೆ. ಮತ್ತು ನಿಮ್ಮ ರೇಟಿಂಗ್ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆಯಿದ್ದರೆ, ನೀವು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಆ್ಯಪ್ ಪ್ರವೇಶವನ್ನು ಕಳೆದುಕೊಳ್ಳಬಹುದು.

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಬಹುದಾದ ನಮ್ಮ ಬೆಂಬಲ ತಂಡಕ್ಕೆ ಸಲ್ಲಿಸಲಾಗುವ ಎಲ್ಲಾ ವರದಿಗಳನ್ನು Uber ಪರಿಶೀಲಿಸುತ್ತದೆ ಮತ್ತು ನಾವು ವಿಶೇಷ ತಂಡದ ಮೂಲಕವೂ ಸಹ ತನಿಖೆ ಮಾಡಬಹುದು. ನಮ್ಮ ಪರಿಶೀಲನೆ ಕಾರ್ಯವು ಪೂರ್ಣಗೊಳ್ಳುವವರೆಗೂ ನಿಮ್ಮ ಖಾತೆಯನ್ನು ತಡೆಹಿಡಿಯಬಹುದು. ನೀವು ನಮ್ಮ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ನಿಮ್ಮ Uber ಖಾತೆಗಳಿಗೆ ಪ್ರವೇಶವನ್ನು ಕಳೆದುಕೊಳ್ಳಬಹುದು.

ಈ ಪುಟವು Uber ನ ಸಮುದಾಯ ಮಾರ್ಗಸೂಚಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಹೇಳುವ ಸಂಪನ್ಮೂಲವಾಗಿದೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ವಿವರವಾಗಿ ಓದಲು, ಇಲ್ಲಿಗೆ ಹೋಗಿ. ಸವಾರರು ತಮ್ಮ ಬಳಕೆಯ ನಿಯಮಗಳನ್ನು ಇಲ್ಲಿ ಕಾಣಬಹುದು. ಚಾಲಕರು ತಮ್ಮ Uber ಜೊತೆಗಿನ ಕಾನೂನು ಒಪ್ಪಂದವನ್ನು ಇಲ್ಲಿ ನೋಡಬಹುದು.

ನಮ್ಮ ಯಾವುದೇ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದರೆ, ನಿಮ್ಮ Uber ಖಾತೆಗಳಿಗೆ ಪ್ರವೇಶವನ್ನು ಕಳೆದುಕೊಳ್ಳಬಹುದು. ನಿರ್ದಿಷ್ಟ ಕ್ರಿಯೆಗಳು Uber ಸಮುದಾಯದ ಸುರಕ್ಷತೆಗೆ ಧಕ್ಕೆ ತರುತ್ತವೆ ಅಥವಾ Uber ನ ಬ್ರ್ಯಾಂಡ್, ಖ್ಯಾತಿ ಅಥವಾ ವ್ಯವಹಾರಕ್ಕೆ ಹಾನಿಯನ್ನುಂಟುಮಾಡುತ್ತವೆ ಎಂದು ನಾವು ನಿರ್ಧರಿಸಿದರೆ, ಆ್ಯಪ್‌ನ ಹೊರಗೆ ನೀವು ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳನ್ನು ಇದು ಒಳಗೊಂಡಿರಬಹುದು.