Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಕಾನೂನು ನಿಯಮಗಳನ್ನು ಅನುಸರಿಸಿ

ಈ ವಿಭಾಗವು ಪ್ರತಿಯೊಬ್ಬರೂ ಅನುಸರಿಸಬೇಕಾದ ಕಾನೂನು ಮತ್ತು ನಿಬಂಧನೆಗಳನ್ನು ಆಧರಿಸಿರುತ್ತದೆ. ಉದಾಹರಣೆಗೆ, ಯಾವುದೇ ಅಪರಾಧ ಕೃತ್ಯಗಳಿಗೆ ಅಥವಾ ಬೇರೆ ಯಾವುದೇ ಕಾನೂನನ್ನು ಉಲ್ಲಂಘಿಸಲು Uber ಆ್ಯಪ್‌ಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಕಾರಿನ ಸೀಟುಗಳು

ಶಿಶುಗಳು ಮತ್ತು ಸಣ್ಣ ಮಕ್ಕಳ ಜೊತೆಗೆ ಪ್ರಯಾಣಿಸುವಾಗ ಚಾಲಕರು ಮತ್ತು ಸವಾರರು ಸ್ಥಳೀಯ ಕಾನೂನುಗಳನ್ನು ಪಾಲಿಸಬೇಕು. ಮಕ್ಕಳ ಜೊತೆಗೆ ಸವಾರಿ ಮಾಡುವಾಗ, ಸೂಕ್ತವಾದ ಕಾರ್ ಆಸನವನ್ನು ಒದಗಿಸುವುದು ಮತ್ತು ಹೊಂದಿಸುವುದು ಖಾತೆದಾರರ' ಜವಾಬ್ದಾರಿಯಾಗಿದೆ. 12 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಬೇಕು.

  • ಸಣ್ಣ ಮಕ್ಕಳ ಜೊತೆಗೆ ಪ್ರಯಾಣಿಸುತ್ತಿರುವಾಗ, ಮಕ್ಕಳಿಗೆ ಕಾರಿನ ಸೀಟು ಒದಗಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಸಣ್ಣ ಮಕ್ಕಳಿಗೆ ಇಡೀ ಪ್ರಯಾಣದುದ್ದಕ್ಕೂ ಕಾರಿನ ಸೀಟುಗಳನ್ನು ನೀಡಬೇಕು ಮತ್ತು ಅವರನ್ನು ತೊಡೆಯ ಮೇಲೆ ಕೂರಿಸಿಕೊಳ್ಳಬಾರದು. ನೆನಪಿಡಿ, ಎಲ್ಲಾ ಕಾರ್ ಆಸನಗಳು ಎಲ್ಲಾ ಕಾರುಗಳಿಗೆ ಹೊಂದಿಕೆಯಾಗುವುದಿಲ್ಲ. ಆದ್ದರಿಂದ ನೀವು ಸೂಕ್ತವಾದ ಕಾರಿನ ಸೀಟು ಹೊಂದಿಲ್ಲದಿದ್ದರೆ ಅಥವಾ ಕಾರಿನಲ್ಲಿ ಆಸನವನ್ನು ಅಳವಡಿಸುವುದು ಸೂಕ್ತವೆನಿಸದಿದ್ದರೂ ಕೂಡ ಚಾಲಕರು ಸವಾರಿಯನ್ನು ನಿರಾಕರಿಸಬಹುದು.

  • ಸಣ್ಣ ಮಕ್ಕಳ ಜೊತೆಗೆ ಪ್ರಯಾಣಿಸುವ ಸವಾರರನ್ನು ಪಿಕಪ್ ಮಾಡುವಾಗ, ಚಾಲನೆ ಮಾಡುವ ಮೊದಲು ಕಾರಿನ ಸೀಟನ್ನು ಸರಿಯಾಗಿ ಹೊಂದಿಸಿಕೊಳ್ಳಲು ನೀವು ಅವರಿಗೆ ಸ್ವಲ್ಪ ಸಮಯವನ್ನು ನೀಡಬೇಕಾಗುತ್ತದೆ. ಅವರು ಸರಿಯಾದ ಕಾರಿನ ಸೀಟನ್ನು ಹೊಂದಿಲ್ಲದಿದ್ದರೆ ಅಥವಾ ಸವಾರರು ನಿಮ್ಮ ಕಾರಿನಲ್ಲಿ ಸೀಟನ್ನು ಹೊಂದಿಸುವುದು ನಿಮಗೆ ಇಷ್ಟವಾಗದಿದ್ದರೆ, ನೀವು ಸವಾರಿಯನ್ನು ರದ್ದುಪಡಿಸಬಹುದು. ಇದರ ಆಧಾರದ ಮೇಲೆ ಟ್ರಿಪ್‌ಗಳನ್ನು ನಿರಾಕರಿಸುವುದು ಅಥವಾ ರದ್ದುಪಡಿಸುವುದರಿಂದ ನಿಮ್ಮ ಚಾಲಕ ರೇಟಿಂಗ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನಿಸಿ.

ಎಲ್ಲಾ ನಿಯಮಗಳನ್ನು ಅನುಸರಿಸಿ

ವಿಮಾನ ನಿಲ್ದಾಣದಲ್ಲಿದ್ದಾಗ ವಿಮಾನ ನಿಲ್ದಾಣದ ನಿಯಮಗಳು ಮತ್ತು ನಿಬಂಧನೆಗಳು, ಹಾಗೆಯೇ Uber ಆ್ಯಪ್‌ಗಳನ್ನು ಬಳಸುವಾಗ ವೇಗ ಮತ್ತು ಸಂಚಾರ ಕಾನೂನುಗಳು ಸೇರಿದಂತೆ ರಸ್ತೆಯ ನಿಯಮಗಳನ್ನೊಳಗೊಂಡ ಎಲ್ಲಾ ಸಂಬಂಧಿತ ಸ್ಥಳೀಯ ಕಾನೂನುಗಳನ್ನು ನೀವು ತಿಳಿದಿರಬೇಕು ಮತ್ತು ಪಾಲಿಸಬೇಕು.

  • ಎಲ್ಲಾ ಸಂಬಂಧಿತ ಪರವಾನಗಿಗಳು, ಅನುಮತಿಗಳು ಮತ್ತು ಚಾಲಕರಿಗೆ ಅಗತ್ಯವಿರುವ ಯಾವುದೇ ಕಾನೂನು ದಾಖಲೆಗಳು ಅಪ್ ಟು ಡೇಟ್ ಆಗಿರಬೇಕು. ಉದಾಹರಣೆಗೆ, ಎಲ್ಲಾ ಚಾಲಕರು ಕಾನೂನಿನ ಪ್ರಕಾರವಾಗಿ ಮಾನ್ಯ ಚಾಲಕರ ಪರವಾನಗಿ, ವಿಮೆ ಮತ್ತು ವಾಹನ ನೋಂದಣಿಯನ್ನು ನಿರ್ವಹಿಸಬೇಕಾಗುತ್ತದೆ. ರೈಡ್‌ಶೇರಿಂಗ್‌ಗಾಗಿ, ಇದು ನಿಮ್ಮ ಪ್ರದೇಶದಲ್ಲಿನ ರೈಡ್ ‌ಶೇರ್ ಅಥವಾ ಬಾಡಿಗೆಗೆ ಚಾಲಕರಿಗೆ ಅನ್ವಯವಾಗುವ ನಿಬಂಧನೆ ಅವಶ್ಯಕತೆಗಳನ್ನು ಪೂರೈಸುವುದನ್ನು ಒಳಗೊಂಡಿದೆ.

    ಟ್ರಿಪ್‌ನ ಸಮಯದಲ್ಲಿ ಸಂಭವಿಸುವ ಘರ್ಷಣೆಗಳು ಮತ್ತು ಸಂಚಾರ ಉಲ್ಲಂಘನೆಗಳ ಕುರಿತಾದ ವರದಿಗಳನ್ನು ನಾವು ಪರಿಶೀಲಿಸುತ್ತೇವೆ. ಪಾರ್ಕಿಂಗ್ ಕುರಿತಾದ ಸ್ಥಳೀಯ ನಿಯಮಗಳು ನೀವು ಸವಾರರು ಬರುವವರೆಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಎಲ್ಲಿ ನಿಲ್ಲಿಸಬೇಕು ಎಂಬುದನ್ನು ಮಿತಿಗೊಳಿಸಬಹುದು. ಉದಾಹರಣೆಗೆ, ಬೈಕ್ ಲೇನ್‌ಗಳಲ್ಲಿ ನಿಲ್ಲಿಸುವುದು ಅಥವಾ ಅಕ್ಸೆಸ್ ರಾಂಪ್‌ಗಳನ್ನು ನಿರ್ಬಂಧಿಸುವಿಕೆಯು ಕಾನೂನು ನಿಯಮಗಳನ್ನು ಉಲ್ಲಂಘಿಸಬಹುದು.

  • ಎಲ್ಲರ ಸುರಕ್ಷತೆಗಾಗಿ, ನಿಮ್ಮ ಚಾಲಕರು ಡ್ರೈವಿಂಗ್ ಕಾರ್ಯವನ್ನು ನಿಭಾಯಿಸಲು ಅವಕಾಶ ಮಾಡಿಕೊಡಿ. ಉದಾಹರಣೆಗೆ, ಸ್ಟೀರಿಂಗ್ ಮುಟ್ಟಬೇಡಿ ಮತ್ತು ಗೇರ್ ಶಿಫ್ಟ್ ಅಥವಾ ಇತರ ನಾಬ್‌ಗಳು, ಬಟನ್‌ಗಳು ಅಥವಾ ವಾಹನವನ್ನು ನಿರ್ವಹಿಸಲು ಬಳಸುವ ಕಾಂಪೊನೆಂಟ್‌ಗಳನ್ನು ಹಾಳು ಮಾಡಬೇಡಿ. ವಾಹನವನ್ನು'ವೇಗವಾಗಿ ಓಡಿಸುವಂತೆ ಅಥವಾ ಎಲ್ಲಿ ಬೇಕೆಂದರಲ್ಲಿ ಸ್ಟಾಪ್ ನೀಡುವಂತೆ, ಡ್ರಾಪ್ ಮಾಡುವಂತೆ ಇಲ್ಲವೇ ಚಾಲನೆ ಕೌಶಲ್ಯಗಳನ್ನು ತೋರಿಸುವಂತೆ ಚಾಲಕರ ಬಳಿ ಕೇಳಬೇಡಿ.

  • ಬೈಕು ಅಥವಾ ಸ್ಕೂಟರ್ ಸವಾರಿ ಮಾಡುವಾಗ ಅಥವಾ ನಿಲುಗಡೆ ಮಾಡುವಾಗ, ಸ್ಥಳೀಯ ನೀತಿಗಳು ಮತ್ತು ನಿಯಮಗಳನ್ನು ಗಮನದಲ್ಲಿರಿಸಿಕೊಳ್ಳಿ; ಅನ್ವಯವಾಗುವ ಕಾನೂನುಗಳ ಕುರಿತು ತಿಳಿದುಕೊಳ್ಳಲು, ನಿಮ್ಮ ನಗರದ ಸರ್ಕಾರಿ ವೆಬ್‌ಸೈಟ್‌ಗೆ ನೀವು ಭೇಟಿ ನೀಡಬಹುದು. ಸ್ಥಳೀಯ ಸಾರಿಗೆ ನಿಯಮಗಳನ್ನು ಅನುಸರಿಸುವುದೆಂದರೆ ನೀವು ಪಾದಚಾರಿಗಳಿಗೆ ದಾರಿ ಕೊಡುವುದು, ಟ್ರಾಫಿಕ್ ನಿಯಮಗಳಿಗೆ ಅನುಗುಣವಾಗಿ ಸವಾರಿ ಮಾಡುವುದು, ನೀವು ಮಾರ್ಗವನ್ನು ಬದಲಾಯಿಸಲು ಯೋಜಿಸುತ್ತಿದ್ದರೆ ಕೈ ಸಂಕೇತ ತೋರಿಸುವುದು ಮತ್ತು ಕೆಂಪು ದೀಪಗಳು ಮತ್ತು ನಿಲ್ಲಿಸು ಸಂಕೇತಗಳನ್ನು ತೋರಿಸುವಾಗ ವಾಹನವನ್ನು ನಿಲ್ಲಿಸುವುದು, ಮುಂತಾದ ಸಂಚಾರಿ ನಿಯಮಗಳನ್ನು ಪಾಲಿಸುವುದಾಗಿರುತ್ತದೆ.

ಸೇವೆ ಪ್ರಾಣಿಗಳು

ಚಾಲಕರು ಸಾಕುಪ್ರಾಣಿಯನ್ನು ಹೊಂದಿರುವ ಯಾರಿಗೇ ಆದರೂ ಸವಾರಿ ಸೇವೆಗಳನ್ನು ಒದಗಿಸಬೇಕೆಂದು ಸ್ಥಳೀಯ ಕಾನೂನುಗಳು ಹೇಳುತ್ತವೆ. ಚಾಲಕರಿಗೆ ಅಲರ್ಜಿಗಳು, ಧಾರ್ಮಿಕ ಆಕ್ಷೇಪಣೆಗಳು ಅಥವಾ ಪ್ರಾಣಿಗಳ ಭಯವಿದ್ದರೂ ಸಹ, ಸವಾರರು ತಮ್ಮ ಸೇವಾ ಪ್ರಾಣಿಗಳ ಕಾರಣದಿಂದಾಗಿ ಟ್ರಿಪ್ ಅನ್ನು ಗೊತ್ತಿದ್ದೂ ನಿರಾಕರಿಸುವುದರಿಂದ Uber ಆ್ಯಪ್‌ಗಳಿಗೆ ಪ್ರವೇಶವನ್ನು ಕಳೆದುಕೊಳ್ಳುತ್ತಾರೆ.

  • ಸವಾರರು ತಮ್ಮ ಸಾಕುಪ್ರಾಣಿಯ ಜೊತೆಗೆ ಪ್ರಯಾಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ನೀವು ಟ್ರಿಪ್ ಅನ್ನು ನಿರಾಕರಿಸುವಂತಿಲ್ಲ.

  • ನೀವು ಸೇವಾ ಪ್ರಾಣಿಗಳ ಜೊತೆಗೆ ಸವಾರಿ ಮಾಡುತ್ತಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಚಾಲಕನು ನಿಮ್ಮನ್ನು ಕರೆದೊಯ್ಯಲು ನಿರಾಕರಿಸುವಂತಿಲ್ಲ. ನಿಮ್ಮ ಜೊತೆಗೆ 'ಸೇವಾ ಪ್ರಾಣಿಯಾಗಿಲ್ಲದ ಪ್ರಾಣಿಯು 'ಪ್ರಯಾಣಿಸುತ್ತಿಲ್ಲದಿದ್ದರೆ, ನಿಮ್ಮ ಚಾಲಕನನ್ನು 'ಸಂಪರ್ಕಿಸುವುದು ಮತ್ತು ನೀವು ಸಾಕುಪ್ರಾಣಿಯ ಜೊತೆಗೆ ಪ್ರಯಾಣಿಸುತ್ತಿದ್ದೀರಿ ಎಂಬುದನ್ನು ಅವರಿಗೆ ತಿಳಿಸುವುದು ಉತ್ತಮ ಶಿಷ್ಟಾಚಾರವಾಗಿರುತ್ತದೆ. ಸೇವಾ ಪ್ರಾಣಿಗಳಲ್ಲದ ನಿಮ್ಮ ಸಾಕುಪ್ರಾಣಿಗಳನ್ನು ಪ್ರಯಾಣದ ಜೊತೆಗೆ ಕರೆದೊಯ್ಯಬೇಕೇ ಎಂಬುದನ್ನು ನಿರ್ಧರಿಸಲು ಚಾಲಕರು ಮುಕ್ತರಾಗಿರುತ್ತಾರೆ.

ಡ್ರಗ್‌ಗಳು ಮತ್ತು ಆಲ್ಕೋಹಾಲ್

Uber ಆ್ಯಪ್‌ಗಳನ್ನು ಬಳಸುವಾಗ ಡ್ರಗ್ ಬಳಕೆ ಮತ್ತು ಆಲ್ಕೋಹಾಲ್ ಬಾಟಲಿಗಳನ್ನು ತೆರೆಯುವುದಕ್ಕೆ ಎಂದಿಗೂ ಅವಕಾಶವಿರುವುದಿಲ್ಲ.

  • ಅಕ್ರಮ ಔಷಧಿಗಳು ಅಥವಾ ಮುಚ್ಚಳ ತೆರೆದ ಮದ್ಯದ ಬಾಟಲಿಗಳನ್ನು ಎಂದಿಗೂ ಕಾರಿನೊಳಗೆ ತರಬೇಡಿ. ನಿಮ್ಮ ಚಾಲಕರು ಡ್ರಗ್ಸ್ ಅಥವಾ ಆಲ್ಕೋಹಾಲ್ ಪ್ರಭಾವಕ್ಕೆ ಒಳಗಾಗಿರಬಹುದು ಎಂದು ನಂಬಲು ನಿಮಗೆ ಕಾರಣವಿದ್ದರೆ, ಟ್ರಿಪ್ ಅನ್ನು ಕೂಡಲೇ ನಿಲ್ಲಿಸುವಂತೆ ಚಾಲಕರಿಗೆ ತಿಳಿಸಿ. ಆಮೇಲೆ ಕಾರಿನಿಂದ ಕೆಳಗಿಳಿದ ಬಳಿಕ, ನಿಮ್ಮ ಸ್ಥಳೀಯ ಅಧಿಕಾರಿಗಳಿಗೆ ಅಥವಾ ತುರ್ತು ಸೇವೆಗಳಿಗೆ ಕರೆ ಮಾಡಿ. ವಾಹನದಿಂದ ಕೆಳಗಿಳಿದ ಬಳಿಕ, ನಿಮ್ಮ ಅನುಭವದ ಕುರಿತು Uber ‌ಗೆ ಸಹ ದಯವಿಟ್ಟು ವರದಿ ಮಾಡಿ.

  • ಕಾನೂನಿನ ಪ್ರಕಾರ, ನೀವು ಮಾದಕ ವ್ಯಸನಕ್ಕೆ ಒಳಗಾಗಿರುವಾಗ ಚಾಲನೆ ಮಾಡುವಂತಿಲ್ಲ. ಮದ್ಯಪಾನ, ಮಾದಕ ದ್ರವ್ಯಗಳನ್ನು ಸೇವಿಸಿರುವಾಗ ಅಥವಾ ವಾಹನವನ್ನು ಸುರಕ್ಷಿತವಾಗಿ ಓಡಿಸುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಬೇರಾವುದೇ ವಸ್ತು ಸೇವನೆಯ ಪ್ರಭಾವದಲ್ಲಿರುವಾಗ ಯಾವುದೇ ವ್ಯಕ್ತಿಯು ಚಾಲನೆ ಮಾಡಬಾರದೆಂದು ಕಾನೂನು ನಿಯಮಗಳು ನಿರ್ಬಂಧವನ್ನು ಹೇರುತ್ತವೆ. ತುಂಬಾ ಕುಡಿದ ಅಥವಾ ದುರ್ವರ್ತನೆಯನ್ನು ತೋರುವ ಸವಾರರನ್ನು ನೀವು ಎದುರಿಸಿಬೇಕಾಗಿ ಬಂದರೆ, ನಿಮ್ಮ ಸ್ವಂತ ಸುರಕ್ಷತೆಗಾಗಿ ಟ್ರಿಪ್ ಅನ್ನು ನಿರಾಕರಿಸುವ ಅಧಿಕಾರ ನಿಮಗಿದಿ. ಸವಾರರು ಟ್ರಿಪ್‌ನಲ್ಲಿ ಪ್ರಯಾಣಿಸುತ್ತಿರುವಾಗ ತೆರೆದ ಮದ್ಯದ ಬಾಟಲಿಗಳನ್ನು ತರಬಾರದು ಅಥವಾ ಮಾದಕ ದ್ರವ್ಯಗಳ ಪ್ರಭಾವಕ್ಕೆ ಒಳಗಾಗಿರಬಾರದು. ತುಂಬಾ ಕುಡಿದ ಅಥವಾ ದುರ್ವರ್ತನೆಯನ್ನು ತೋರುವ ಸವಾರರನ್ನು ನೀವು ಎದುರಿಸಿಬೇಕಾಗಿ ಬಂದರೆ, ನಿಮ್ಮ ಸ್ವಂತ ಸುರಕ್ಷತೆಗಾಗಿ ಟ್ರಿಪ್ ಅನ್ನು ನಿರಾಕರಿಸುವ ಅಧಿಕಾರ ನಿಮಗಿದೆ.

  • ಮದ್ಯಪಾನ, ಮಾದಕ ದ್ರವ್ಯಗಳನ್ನು ಸೇವಿಸಿರುವಾಗ ಅಥವಾ ವಾಹನವನ್ನು ಸುರಕ್ಷಿತವಾಗಿ ಓಡಿಸುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಬೇರಾವುದೇ ವಸ್ತು ಸೇವನೆಯ ಪ್ರಭಾವದಲ್ಲಿರುವಾಗ ಎಂದಿಗೂ ಸವಾರಿ ಮಾಡಬೇಡಿ.

ಬಂದೂಕುಗಳು ಹಾಗೂ ಶಸ್ತ್ರಾಸ್ತ್ರಗಳು

ಸವಾರರು ಮತ್ತು ಅವರ ಅತಿಥಿಗಳು ಮತ್ತು ಚಾಲಕರು, Uber ಆ್ಯಪ್ ಬಳಸುವಾಗ ಯಾವುದೇ ರೀತಿಯ ಬಂದೂಕುಗಳು ಅಥವಾ ಶಸ್ತ್ರಾಸ್ತ್ರಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಹಾಗೆ ಮಾಡಲು ಅನ್ವಯವಾಗುವ ಕಾನೂನಿನ ಮೂಲಕ ಅನುಮತಿ ಪಡೆದಿರಬೇಕು.

ವಂಚನೆ

ವಂಚನೆಯು ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಅಪಾಯಕಾರಿಯೂ ಹೌದು. ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸುಳ್ಳು ಮಾಡುವುದು ಅಥವಾ ಸೈನ್ ಇನ್ ಮಾಡುವಾಗ ಅಥವಾ ಭದ್ರತಾ ಪರಿಶೀಲನೆಗೆ ಒಳಪಡುವಾಗ ಬೇರೊಬ್ಬರ' ಗುರುತನ್ನು ಊಹಿಸುವುದನ್ನು ಅನುಮತಿಸಲಾಗುವುದಿಲ್ಲ.

ಘಟನೆಗಳ ಕುರಿತು ವರದಿ ಮಾಡುವಾಗ, ನಿಮ್ಮ Uber ಖಾತೆಗಳನ್ನು ರಚಿಸುವಾಗ ಮತ್ತು ಪ್ರವೇಶಿಸುವಾಗ, ದರಗಳು ಅಥವಾ ಶುಲ್ಕಗಳ ಕುರಿತು ತಕರಾರು ಸಲ್ಲಿಸುವಾಗ ಮತ್ತು ಕ್ರೆಡಿಟ್‌ಗಳಿಗೆ ವಿನಂತಿಸಿಕೊಳ್ಳುವಾಗ ನಿಖರವಾದ ಮಾಹಿತಿಯನ್ನು ಒದಗಿಸಿ. ನೀವು ಅರ್ಹತೆಯನ್ನು ಹೊಂದಿರುವ ಶುಲ್ಕಗಳು ಅಥವಾ ಮರುಪಾವತಿಗಳನ್ನು ಮಾತ್ರ ವಿನಂತಿಸಿ ಮತ್ತು ಆಫರ್‌ಗಳು ಮತ್ತು ಪ್ರೋಮೋಗಳನ್ನು ಉದ್ದೇಶಿಸಿದಂತೆ ಮಾತ್ರ ಬಳಸಿ. ಅಮಾನ್ಯ ವಹಿವಾಟುಗಳನ್ನು ಉದ್ದೇಶಪೂರ್ವಕವಾಗಿ ಪೂರ್ತಿಗೊಳಿಸಬೇಡಿ.

ಸ್ಟ್ರೀಟ್ ಹೇಲ್ಸ್

ಪ್ರತಿ ಅನುಭವದ ಸುರಕ್ಷತೆಯನ್ನು ಹೆಚ್ಚಿಸಲು, ಆಫ್-ಆ್ಯಪ್ ಪಿಕಪ್‌ಗಳನ್ನು ನಿಷೇಧಿಸಲಾಗಿದೆ. Uber ಆ್ಯಪ್‌ಗಳನ್ನು ಬಳಸುವಾಗ ಸ್ಟ್ರೀಟ್ ಹೇಲ್‌ಗಳನ್ನು ಕಾನೂನು ನಿಷೇಧಿಸುತ್ತದೆ.ಆದ್ದರಿಂದ Uber ಸಿಸ್ಟಮ್‌ನ ಹೊರಗೆ ಪಾವತಿಯನ್ನು ಎಂದಿಗೂ ಕೇಳಬೇಡಿ ಅಥವಾ ಸ್ವೀಕರಿಸಬೇಡಿ. ಸವಾರರು Uber ಪಾವತಿ ಆಯ್ಕೆಯನ್ನು ಬಳಸದ ಹೊರತು ಚಾಲಕರು Uber ವ್ಯವಸ್ಥೆಯ ಹೊರಗೆ ಎಂದಿಗೂ ಪಾವತಿಗಾಗಿ ವಿನಂತಿಸಬಾರದು ಅಥವಾ ಸ್ವೀಕರಿಸಬಾರದು.

ಇತರೆ ಸ್ವೀಕಾರಾರ್ಹವಲ್ಲದ ಚಟುವಟಿಕೆಗಳು

ಅನುಮತಿಯಿಲ್ಲದೆ Uber ನ ಟ್ರೇಡ್‌ಮಾರ್ಕ್ ಅಥವಾ ಬೌದ್ಧಿಕ ಆಸ್ತಿಯನ್ನು ಬಳಸುವಂತಹ ವ್ಯವಹಾರಗಳು ಅಥವಾ ಬ್ರ್ಯಾಂಡ್‌ಗೆ ಎಂದಿಗೂ ಹಾನಿ ಮಾಡಬೇಡಿ.

ಕಾನೂನುಬಾಹಿರ, ತಾರತಮ್ಯ, ದ್ವೇಷಪೂರಿತ ಅಥವಾ ಲೈಂಗಿಕ ಅಭಿವ್ಯಕ್ತಿಪೂರ್ವಕ ಚಟುವಟಿಕೆಗಳ ಭಾಗವಾಗಿ Uber ಆ್ಯಪ್‌ಗಳಲ್ಲಿ ಸವಾರಿಗಳು, ಬೈಕು ಅಥವಾ ಸ್ಕೂಟರ್ ಟ್ರಿಪ್‌ಗಳು, ಸಾಗಣೆ ಅಥವಾ ಇತರ ಚಟುವಟಿಕೆಗಳ ವ್ಯವಸ್ಥೆ ಮಾಡಲು ಮತ್ತು ಪಾವತಿಸಲು ಇಲ್ಲವೇ ಜಾಹೀರಾತು ನೀಡಲು ಯಾವುದೇ Uber ಖಾತೆಯನ್ನು ಬಳಸಬಾರದು.

  • ಚಾಲಕರು Uber ನಿಂದ ಪಡೆದ Uber ಬ್ರಾಂಡ್ ವಸ್ತುಗಳನ್ನು ಮಾತ್ರ ಬಳಸಬೇಕು. ದೀಪಗಳು, ಫಲಕಗಳು, ಚಿಹ್ನೆಗಳು ಅಥವಾ Uber ನ ಹೆಸರು ಅಥವಾ ಟ್ರೇಡ್‌ಮಾರ್ಕ್ ಹೊಂದಿರುವ ಅಂತಹುದೇ ವಸ್ತುಗಳಂತಹ ಅನಧಿಕೃತ ಅಥವಾ ಥರ್ಡ್ ಪಾರ್ಟಿ ವಸ್ತುಗಳ ಬಳಕೆಯಿಂದಾಗಿ ಸವಾರರು ಗೊಂದಲಕ್ಕೀಡಾಗಬಹುದು.

ಇನ್ನಷ್ಟು ಸಮುದಾಯ ಮಾರ್ಗಸೂಚಿಗಳನ್ನು ನೋಡಿ

ಎಲ್ಲರನ್ನು ಗೌರವದಿಂದ ಕಾಣಿರಿ

ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو