Please enable Javascript
ಮುಖ್ಯ ವಿಷಯಕ್ಕೆ ತೆರಳಿ

ಎಲ್ಲರನ್ನು ಗೌರವದಿಂದ ಕಾಣಿರಿ

ಪ್ರತಿಯೊಬ್ಬರಲ್ಲಿಯೂ ಬೆಂಬಲ ಹಾಗೂ ಮುಕ್ತ ಸಂವಹನೆಯ ಭಾವನೆ ಮೂಡಬೇಕೆಂಬುದು ನಮ್ಮ ಭಾವನೆ. ಅದಕ್ಕಾಗಿಯೇ ನಾವು ಮೈ ಮುಟ್ಟುವುದು, ಲೈಂಗಿಕ ದೌರ್ಜನ್ಯ ಮತ್ತು ದುಷ್ಕೃತ್ಯ, ಬೆದರಿಕೆ ಮತ್ತು ಅಸಭ್ಯ ವರ್ತನೆ, ಅನಪೇಕ್ಷಿತ ಸಂಪರ್ಕ, ತಾರತಮ್ಯ ಮತ್ತು ಆಸ್ತಿಪಾಸ್ತಿ ಹಾನಿ ಕುರಿತು ಮಾನದಂಡಗಳನ್ನು ರಚಿಸಿದ್ದೇವೆ.

ದೈಹಿಕ ಸಂಪರ್ಕ

Uber ನ ಯಾವುದೇ ಆ್ಯಪ್‌‌‌ಗಳನ್ನು ಬಳಸುವಾಗ ಅಪರಿಚಿತ ವ್ಯಕ್ತಿಗಳು ಅಥವಾ ನೀವು ಆಗಷ್ಟೇ ಭೇಟಿಯಾದ ಯಾರನ್ನೂ ಮುಟ್ಟಬೇಡಿ. ಯಾರಿಗಾದರೂ ಹೊಡೆಯುವುದು, ಮನಸ್ಸಿಗೆ ನೋಯಿಸುವುದು ಅಥವಾ ಬೇರೆ ರೀತಿಯಲ್ಲಿ ನೋಯಿಸುವ ಉದ್ದೇಶವನ್ನು ಎಂದಿಗೂ ಅನುಮತಿಸಲಾಗುವುದಿಲ್ಲ.

ಲೈಂಗಿಕ ದೌರ್ಜನ್ಯ ಮತ್ತು ದುರ್ನಡತೆ

ಯಾವುದೇ ಪ್ರಕಾರದ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ದರ್ವರ್ತನೆಯನ್ನು ನಿಷೇಧಿಸಲಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ದುಷ್ಕೃತ್ಯವು ಯಾವುದೇ ವ್ಯಕ್ತಿಯ ಸ್ಪಷ್ಟ ಒಪ್ಪಿಗೆಯಿಲ್ಲದೆ ನಡೆಸುವ ಅಥವಾ ನಡೆಸಲು ಪ್ರಯತ್ನಿಸುವ ಲೈಂಗಿಕ ಸಂಪರ್ಕ ಅಥವಾ ನಡವಳಿಕೆಯನ್ನು ಸೂಚಿಸುತ್ತದೆ.

ವೈಯಕ್ತಿಕ ಸ್ಥಳ ಮತ್ತು ಗೌಪ್ಯತೆಯನ್ನು ಗೌರವಿಸಬೇಕು. ಕೆಳಗಿನ ಪಟ್ಟಿಯು ಅಸಮರ್ಪಕ ನಡವಳಿಕೆಯ ಕುರಿತು ಉದಾಹರಣೆಗಳನ್ನು ಒದಗಿಸುತ್ತದೆ, ಆದರೆ ಸಮಗ್ರವಾಗಿಲ್ಲ.

  • ಜನರಿಗೆ ಅನಾನುಕೂಲತೆ ಉಂಟುಮಾಡುವ ವರ್ತನೆಗಳು ಮತ್ತು ಕಾಮೆಂಟ್‌ಗಳು ಸ್ವೀಕಾರಾರ್ಹವಲ್ಲ. ಉದಾಹರಣೆಗಳೆಂದರೆ, ದೇಹ ಸ್ಪರ್ಶಿಸುವುದು, ಸಿಳ್ಳೆ ಹೊಡೆಯುವುದು ಮತ್ತು ಕಣ್ಣು ಮಿಟುಕಿಸುವುದು. ನಿಮಗೆ ಗೊತ್ತಿಲ್ಲದ ಜನರನ್ನು ಮುಟ್ಟಬೇಡಿ ಅಥವಾ ಚೆಲ್ಲಾಟವಾಡಬೇಡಿ.
  • ಅನಗತ್ಯವೆಂದು ಗ್ರಹಿಸಬಹುದಾದ ಕೆಲವು ಸಂಭಾಷಣೆಗಳು ಆಕ್ರಮಣಕಾರಿಯಾಗಿರಬಹುದು. ನೋಟ, ಗ್ರಹಿಕೆಯ ಮೂಲಕ ಲಿಂಗ ಗುರುತಿಸುವಿಕೆ ಅಥವಾ ಲೈಂಗಿಕ ದೃಷ್ಟಿಕೋನದ ಕುರಿತು ಪ್ರತಿಕ್ರಿಯಿಸಬೇಡಿ. “ನೀವು ಸಂಬಂಧದಲ್ಲಿದ್ದೀರಾ?” ಎಂಬ ಸಂಬಂಧವಿಲ್ಲದ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವುದನ್ನು ತಪ್ಪಿಸಿ. ನಿಮ್ಮ ಸ್ವಂತ ಅಥವಾ ಬೇರೊಬ್ಬರ ಲೈಂಗಿಕ ಜೀವನದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ, ಸ್ಪಷ್ಟ ಭಾಷೆಯನ್ನು ಬಳಸುವುದು ಅಥವಾ ಲೈಂಗಿಕತೆಯ ಬಗ್ಗೆ ಹಾಸ್ಯ ಮಾಡುವುದು ಕೂಡ ಸಮಂಜಸವಲ್ಲ.
  • Uber ನಿರ್ದಿಷ್ಟವಾಗಿ ಲೈಂಗಿಕತೆ ವಿರೋಧ ವ್ಯಕ್ತಪಡಿಸುವ ನಿಯಮಾವಳಿಗಳನ್ನು ಹೊಂದಿದೆ. Uber ಆ್ಯಪ್‌ಗಳ ಬಳಕೆಯ ಸಮಯದಲ್ಲಿ ಹಾಗೆಯೇ ಟ್ರಿಪ್‌ನಲ್ಲಿ ಪ್ರಯಾಣಿಸುತ್ತಿರುವಾಗಲೂ ಲೈಂಗಿಕ ಸಂಪರ್ಕವನ್ನು ನಿಷೇಧಿಸಲಾಗಿದೆ. ಇಲ್ಲಿ ಇನ್ನಷ್ಟು ತಿಳಿಯಿರಿ.

ಬೆದರಿಕೆ ಹಾಗೂ ಅಸಭ್ಯ ವರ್ತನೆ

ಆಕ್ರಮಣಕಾರಿ, ಮುಖಾಮುಖಿ ಸಂಭಾಷಣೆ ಅಥವಾ ಕಿರುಕುಳ ನೀಡುವ ನಡವಳಿಕೆಗಳಿಗೆ ನಮ್ಮಲ್ಲಿ ಅವಕಾಶವಿಲ್ಲ. ದುರ್ನಡತೆಯ ಭಾಷೆಯನ್ನು ಬಳಸಬೇಡಿ, ಅಗೌರವ ಅಥವಾ ಬೆದರಿಕೆ ಹಾಕುವಂತಹ ಭಾವಭಂಗಿಗಳನ್ನು ತೋರಿಸಬೇಡಿ. ಧರ್ಮ ಮತ್ತು ರಾಜಕೀಯ ನಂಬಿಕೆಗಳಂತಹ ಸಂಭಾವ್ಯ ವಿಭಜನಕಾರಿಯಾದ ವೈಯಕ್ತಿಕ ವಿಷಯಗಳಿಂದ ದೂರವಿರುವುದು ಉತ್ತಮ.

  • ಚಾಲಕರು ಮತ್ತು ಸಹ-ಸವಾರರ ಜೊತೆಗೆ ನಡೆಸುವ ಸಂಭಾಷಣೆಗಳನ್ನು ಪ್ರಾಸಂಗಿಕವಾಗಿ ಮತ್ತು ಸ್ನೇಹಪರವಾಗಿರಿಸಿಕೊಳ್ಳಿ. ವೈಯಕ್ತಿಕ ಪ್ರಶ್ನೆಗಳನ್ನು ಕೇಳಬೇಡಿ ಅಥವಾ ಇತರರ ಕುರಿತಂತೆ ಆಕ್ರಮಣಕಾರಿಯಾಗಿ ವರ್ತಿಸಬೇಡಿ.

  • ನೀವು ರೈಡರ್‌ಗಳು ಮತ್ತು ಪರಸ್ಪರ ನಡೆಸುವ ಸಂಭಾಷಣೆಗಳನ್ನು ಪ್ರಾಸಂಗಿಕ ಮತ್ತು ಸ್ನೇಹಪರವಾಗಿರಿಸಿ. ವೈಯಕ್ತಿಕ ಪ್ರಶ್ನೆಗಳನ್ನು ಕೇಳಬೇಡಿ ಅಥವಾ ಇತರರ ಕುರಿತಂತೆ ಆಕ್ರಮಣಕಾರಿಯಾಗಿ ವರ್ತಿಸಬೇಡಿ.

ಅನಗತ್ಯ ಸಂಪರ್ಕ

ಟ್ರಿಪ್ ಪೂರ್ಣಗೊಂಡಾಗ ಸಂಪರ್ಕವು ಕೊನೆಗೊಳ್ಳಬೇಕು. ಯಾವುದೇ ಕಳೆದುಕೊಂಡ ವಸ್ತುಗಳನ್ನು ಹಿಂತಿರುಗಿಸಲು ಮಾತ್ರವೇ ಸಂಪರ್ಕಿಸತಕ್ಕದ್ದು. ಉದಾಹರಣೆಗೆ, ಟ್ರಿಪ್ ಮುಗಿದ ನಂತರ ಸಂದೇಶ ಕಳುಹಿಸುವುದು, ಕರೆ ಮಾಡುವುದು, ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸುವುದು, ಭೇಟಿ ಮಾಡುವುದು ಅಥವಾ ವೈಯಕ್ತಿಕವಾಗಿ ಯಾರನ್ನಾದರೂ ಭೇಟಿ ಮಾಡಲು ಪ್ರಯತ್ನಿಸುವುದು ಸ್ವೀಕಾರಾರ್ಹವಲ್ಲ.

  • ನಿಮ್ಮ ಪ್ರಸ್ತುತ ಟ್ರಿಪ್ ಅನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕಾಗಿ ಸವಾರರು ನಿಮ್ಮನ್ನು ಸಂಪರ್ಕಿಸಿದರೆ ಅಥವಾ ಕಳೆದುಹೋದ ವಸ್ತುವನ್ನು ಹಿಂತಿರುಗಿಸಲು ನೀವು ತಕ್ಷಣ Uber ಗೆ ತಿಳಿಸಬೇಕು.

  • ನಿಮ್ಮ ಪ್ರಸ್ತುತ ಟ್ರಿಪ್ ಅಥವಾ ಡೆಲಿವರಿ ಅಥವಾ ಕಳೆದ ಐಟಂ ಅನ್ನು ವಾಪಸು ಮಾಡುವುದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕಾಗಿ ಚಾಲಕರು ನಿಮ್ಮನ್ನು ಸಂಪರ್ಕಿಸಿದರೆ ತಕ್ಷಣವೇ Uber ಗೆ ತಿಳಿಸಿ.

ತಾರತಮ್ಯತೆ

ನೀವು ಯಾವಾಗಲೂ ಸುರಕ್ಷಿತ ಮತ್ತು ಸ್ವಾಗತಿಸಲ್ಪಡುವ ಭಾವನೆಯನ್ನು ಹೊಂದಿರಬೇಕು. ಹೀಗಾಗಿ ನಾವು ತಾರತಮ್ಯದ ನಡವಳಿಕೆ ಮತ್ತು ವರ್ತನೆಯನ್ನು ಸಹಿಸುವುದಿಲ್ಲ. ವಯಸ್ಸು, ಬಣ್ಣ, ಅಂಗವೈಕಲ್ಯತೆ, ಲಿಂಗ ಗುರುತಿಸುವಿಕೆ, ವೈವಾಹಿಕ ಸ್ಥಿತಿ, ರಾಷ್ಟ್ರೀಯ ಮೂಲ, ಜನಾಂಗ, ಧರ್ಮ, ಲೈಂಗಿಕತೆ ಅಥವಾ ಲೈಂಗಿಕ ದೃಷ್ಟಿಕೋನ ಮುಂತಾದ ಗುಣಲಕ್ಷಣಗಳನ್ನು ಆಧರಿಸಿ ಯಾರೊಬ್ಬರ ವಿರುದ್ಧವೂ ತಾರತಮ್ಯ ಧೋರಣೆಯನ್ನು ತೋರಬೇಡಿ.

  • ಆ ಪ್ರದೇಶದಲ್ಲಿ ನೆಲೆಸಿರುವ ಜನರು ಅಥವಾ ವ್ಯವಹಾರಗಳ ಗುಣಲಕ್ಷಣಗಳಿಂದಾಗಿ ನಿರ್ದಿಷ್ಟ ನೆರೆಹೊರೆಯವರನ್ನು ತಪ್ಪಿಸುವ ಉದ್ದೇಶದಿಂದ ಮಾತ್ರ ಉದ್ದೇಶಪೂರ್ವಕವಾಗಿ ನಿರಾಕರಣೆ ಅಥವಾ ರದ್ದುಪಡಿಸುವುದನ್ನು ಅನುಮತಿಸಲಾಗುವುದಿಲ್ಲ.

  • ನಿಮ್ಮ ಕಾನೂನುಬದ್ಧವಾಗಿ ರಕ್ಷಿಸಲ್ಪಟ್ಟ ಗುಣಲಕ್ಷಣಗಳಿಂದಾಗಿ ನಿಮಗೆ ಟ್ರಿಪ್ ಸೇವೆಯನ್ನು ನಿರಾಕರಿಸಲಾಗಿದೆ ಎಂದು ಭಾವಿಸುವುದಾದರೆ, ಅಂತಹ ಘಟನೆಗಳ ಕುರಿತು Uber ಆ್ಯಪ್‌ನಲ್ಲಿ ವರದಿ ಮಾಡಿ.

  • ನೀವು ನಮ್ಮೊಂದಿಗೆ ಬೈಕಿಂಗ್ ಅಥವಾ ಸವಾರಿ ಮಾಡುವಾಗ, ನಿಮ್ಮ ಕಾನೂನುಬದ್ಧವಾಗಿ ರಕ್ಷಿಸಲ್ಪಟ್ಟ ಗುಣಲಕ್ಷಣಗಳ ಆಧಾರದ ಮೇಲೆ ಇನ್ನೊಬ್ಬ ಬಳಕೆದಾರರು ನಿಮ್ಮನ್ನು ಬೆದರಿಸಿದ್ದಾರೆ, ಅವಮಾನಿಸಿದ್ದಾರೆ ಅಥವಾ ಕಿರುಕುಳ ನೀಡಿದ್ದಾರೆ ಎಂದು ನೀವು ಭಾವಿಸುವುದಾದರೆ, ಆ ಘಟನೆಯ ಕುರಿತು Uber ಆ್ಯಪ್‌ನಲ್ಲಿ ವರದಿ ಮಾಡಿ.

ಆಸ್ತಿಪಾಸ್ತಿ ಹಾನಿ

ಆಸ್ತಿಪಾಸ್ತಿ ಹಾನಿಗೆ ನಮ್ಮಲ್ಲಿ ಎಂದಿಗೂ ಅವಕಾಶವಿಲ್ಲ. ಕೆಲವು ಉದಾಹರಣೆಗಳೆಂದರೆ, ಆ್ಯಪ್ ಮೂಲಕ ವಿನಂತಿಸಿದ ಕಾರು, ಬೈಕು, ಸ್ಕೂಟರ್ ಅಥವಾ ಇತರ ಸಾರಿಗೆ ವಿಧಾನವನ್ನು ಹಾನಿಗೊಳಿಸುವುದು; ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಮುರಿಯುವುದು ಅಥವಾ ಧ್ವಂಸ ಮಾಡುವುದು; ಉದ್ದೇಶಪೂರ್ವಕವಾಗಿ ಆಹಾರ ಅಥವಾ ಪಾನೀಯವನ್ನು ಚೆಲ್ಲುವುದು; ಕಾರಿನಲ್ಲಿ ಧೂಮಪಾನ ಮಾಡುವುದು; ಅಥವಾ ಅತಿಯಾದ ಆಲ್ಕೋಹಾಲ್ ಸೇವನೆಯಿಂದ ಅಥವಾ ಬೇರೆ ಕಾರಣದಿಂದ ವಾಂತಿ ಮಾಡುವುದು. ಆಸ್ತಿಪಾಸ್ತಿಯನ್ನು ಹಾನಿಮಾಡಿದ್ದೇ ಆದಲ್ಲಿ, ಸಾಮಾನ್ಯ ಸವಕಳಿಯನ್ನು ಹೊರತುಪಡಿಸಿ ಸ್ವಚ್ಛತೆ ಶುಲ್ಕ ಮತ್ತು ದುರಸ್ತಿ ಶುಲ್ಕಗಳನ್ನು ನೀವೇ ಭರಿಸಬೇಕಾಗುತ್ತದೆ. ಒಂದು ವೇಳೆ ನೀವು Uber ಆ್ಯಪ್‌ಗಳ ಮೂಲಕ ಮೂಲಕ ಬೈಕು, ಮೊಪೆಡ್ ಅಥವಾ ಸ್ಕೂಟರ್ ಅನ್ನು ಬಾಡಿಗೆಗೆ ಪಡೆದರೆ, ನಿಮ್ಮ ಟ್ರಿಪ್‌ನ ಕೊನೆಯಲ್ಲಿ ಅದನ್ನು ಸುರಕ್ಷಿತವಾಗಿ ಲಾಕ್ ಮಾಡಲಾಗಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಹಾಗೆ ಮಾಡಲು ವಿಫಲವಾದರೆ ಹೆಚ್ಚುವರಿ ದರಗಳು ಅಥವಾ ಶುಲ್ಕವನ್ನು ಭರಿಸುವುದಕ್ಕೆ ಕಾರಣವಾಗಬಹುದು.

ಇನ್ನಷ್ಟು ಸಮುದಾಯ ಮಾರ್ಗಸೂಚಿಗಳನ್ನು ನೋಡಿ

ಪರಸ್ಪರ ಸುರಕ್ಷಿತವಾಗಿರಲು ಸಹಾಯ ಮಾಡಿ

ಕಾನೂನು ನಿಯಮಗಳನ್ನು ಅನುಸರಿಸಿ

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو