ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ
ವೈವಿಧ್ಯಮಯ ಪ್ಲಾಟ್‌ಫಾರ್ಮ್‌ನಲ್ಲಿ ಸೇವೆ ಸಲ್ಲಿಸಲು ವೈವಿಧ್ಯಮಯ ತಂಡಗಳನ್ನು ನಿರ್ಮಿಸುವುದು
Uber ಪ್ಲಾಟ್‌ಫಾರ್ಮ್‌ನಲ್ಲಿ, ನಮ್ಮ ದಿನದ 1.9 ಕೋಟಿ ಟ್ರಿಪ್‌ಗಳಲ್ಲಿ ಅಭೂತಪೂರ್ವ ಸಂಖ್ಯೆಯ ವಿಭಿನ್ನ ಜನರು ಪರಸ್ಪರ ಸಂವಹನ ನಡೆಸುತ್ತಾರೆ. ನಮ್ಮ ಉತ್ಪನ್ನಗಳನ್ನು ಬಳಸುವ ವೈವಿಧ್ಯಮಯ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ರೀತಿಯಲ್ಲಿ ನಾವು ನಮ್ಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ವ್ಯವಹಾರವನ್ನು ಮುನ್ನಡೆಸಬೇಕು. ಅಂದರೆ, ನಾವು ಕಾರ್ಯನಿರ್ವಹಿಸುವ ಮತ್ತು ನೇಮಿಸಿಕೊಳ್ಳುವ ಸಮುದಾಯಗಳ ವೈವಿಧ್ಯತೆಯನ್ನು ಆಂತರಿಕವಾಗಿ ಪ್ರತಿಬಿಂಬಿಸುವುದು ಮತ್ತು ಆ ವೈವಿಧ್ಯತೆಯನ್ನು ಸಮೃದ್ಧಗೊಳಿಸುವುದು ನಮ್ಮ ಕಾರ್ಯಪಡೆಗೆ ಅಗತ್ಯವಾಗಿದೆ ಮತ್ತು ಜನರಲ್ಲಿ ತಾವು ಇಲ್ಲಿಗೆ ಸೇರಿದವರು ಎಂಬ ಭಾವನೆಯನ್ನು ಬೆಳೆಸುವ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ನಮ್ಮದಾಗಿದ್ದು, ಈ ಮೂಲಕ ನಾವು ನಮ್ಮ ಹಂಚಿತ ಯಶಸ್ಸಿಗೆ ಕೊಡುಗೆ ನೀಡಬಹುದಾಗಿದೆ.
ಸಮಯಾವಧಿಯಲ್ಲಿ ಹಂತ ಹಂತವಾಗಿ ಮತ್ತು ಸುಸ್ಥಿರ ಬದಲಾವಣೆಗಳನ್ನು ಮಾಡುವ ಮೂಲಕ, Uber ತನ್ನ ಬುನಾದಿಯನ್ನು ತಳಮಟ್ಟದಿಂದ ಮರುನಿರ್ಮಿಸಿದೆ ಮತ್ತು ನಮ್ಮ ಸಂಸ್ಕೃತಿಯನ್ನು ಸಂಪೂರ್ಣವಾಗಿ ಮರುರೂಪಿಸಿದೆ. ಐದು ವರ್ಷಗಳ ನಂತರ, ವೈವಿಧ್ಯತೆಯು ನಮ್ಮನ್ನು ಹೇಗೆ ಸುದೃಢಗೊಳಿಸುತ್ತಿದೆ ಮತ್ತು ಜಗತ್ತನ್ನು ಉತ್ತಮದೆಡೆಗೆ ಸಾಗಿಸಲು ಹೆಚ್ಚು ಸಮಾನ ಮತ್ತು ಅಂತರ್ಗತ ವಾತಾವರಣವನ್ನು ನಿರ್ಮಿಸಲು ನಮಗೆ ಹೇಗೆ ಅನುವು ಮಾಡಿಕೊಡುತ್ತಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ.
ಉದ್ಯೋಗಿ ಸಂಪನ್ಮೂಲ ಸಮೂಹಗಳು
ಸದಸ್ಯರಿಗಾಗಿ ನಾಯಕತ್ವ ವಿಕಸನ ಅವಕಾಶಗಳ ಜೊತೆಗೆ ಗುರುತು ಮತ್ತು ಅಂತರ್-ವಿಭಾಗೀಯತೆಯ ಕುರಿತು ಅರಿವನ್ನು Uber ಉದ್ಯೋಗಿ ಸಂಪನ್ಮೂಲ ಸಮೂಹಗಳು ಒದಗಿಸುತ್ತವೆ.
Uber ನಲ್ಲಿ ವಿಕಲಚೇತನರು
ವಿಕಲಚೇತರನ ಜೊತೆಗೆ ವಾಸಿಸುತ್ತಿರುವ ಆರೈಕೆದಾರರು ಮತ್ತು ಉದ್ಯೋಗಿಗಳಿಗಾಗಿ Uber ಸಮುದಾಯ