Please enable Javascript
ಮುಖ್ಯ ವಿಷಯಕ್ಕೆ ತೆರಳಿ

ನಮ್ಮ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಕಾರ್ಯವಿಧಾನ

ನಮಗೆ ಮಾತ್ರವಲ್ಲ, ಅವಕಾಶಕ್ಕಾಗಿ ನಮ್ಮ ಪ್ಲಾಟ್‌ಫಾರ್ಮ್ ಅನ್ನು ಅವಲಂಬಿಸಿರುವವರಿಗೂ ಸಹ ಹೆಚ್ಚು ಸುಸ್ಥಿರ, ನ್ಯಾಯಸಮ್ಮತ ಮತ್ತು ಲಾಭದಾಯಕ ಭವಿಷ್ಯದ ಕಲ್ಪನೆಯನ್ನು ಹೊಂದಿದ್ದೇವೆ. ಜಾಗತಿಕ ಕಂಪನಿಯಾಗಿ, ನಾವು ಆಂತರಿಕ ಮತ್ತು ಬಾಹ್ಯ ಅಪಾಯಗಳು ಮತ್ತು ಅವಕಾಶಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ. ವಿವಿಧ ಪರಿಸರ, ಸಾಮಾಜಿಕ ಮತ್ತು ಆಡಳಿತಾತ್ಮಕ ಅಂಶಗಳು ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರಬಹುದು ಎಂದು ನಾವು ಗುರುತಿಸುತ್ತೇವೆ ಮತ್ತು ನಮ್ಮ ವ್ಯವಹಾರವು ಸಮಾಜ ಮತ್ತು ನಮ್ಮ ಪಾಲುದಾರರ ಮೇಲೆ ಬೀರುವ ಪರಿಣಾಮವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ವ್ಯವಹಾರ ಮತ್ತು ಪಾಲುದಾರರ ಹಿತಾಸಕ್ತಿಗಳೊಂದಿಗೆ ನಮ್ಮ ವಾಸ್ತವಿಕ ESG ಆದ್ಯತೆಗಳನ್ನು ಸರಿಹೊಂದಿಸುವ ನಿಟ್ಟಿನಲ್ಲಿ ಶ್ರಮಿಸುವ ಮೂಲಕ, ನಮ್ಮ ಕಾರ್ಯವಿಧಾನಕ್ಕೆ ಸೂಕ್ತವಾದ ಆಡಳಿತಾತ್ಮಕ, ತೊಡಗಿಸಿಕೊಳ್ಳುವಿಕೆ ಮತ್ತು ಚಿಂತನಶೀಲತೆಯನ್ನು ಅನ್ವಯಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ಆರ್ಥಿಕ ಮೌಲ್ಯ ಮತ್ತು ನಿರಂತರವಾದ ದೀರ್ಘಾವಧಿ ಬೆಳವಣಿಗೆಯನ್ನು ರಕ್ಷಿಸಲು ಮತ್ತು ತಲುಪಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ.

ESG ವರದಿ ಮಾಡುವಿಕೆ

ನಾವು ಇಂದು ಎಲ್ಲಿ ನಿಂತಿದ್ದೇವೆ ಎಂಬುದನ್ನು ಗಂಭೀರವಾಗಿ ನೋಡುವುದರ ಮೂಲಕ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಫಲಿತಾಂಶಗಳನ್ನು ಹಂಚಿಕೊಳ್ಳುವುದರೊಂದಿಗೆ ಪ್ರಗತಿ ಪ್ರಾರಂಭವಾಗುತ್ತದೆ. ದಯವಿಟ್ಟು ನಮ್ಮ ಇತ್ತೀಚಿನ ವರದಿಗಳನ್ನು ಈ ಕೆಳಗೆ ನೋಡಿ.

ಚಾಲಕ ಮತ್ತು ಡೆಲಿವರಿ ಪಾರ್ಟ್‌ನರ್ ಯೋಗಕ್ಷೇಮ

ಚಾಲಕರು ಮತ್ತು ಡೆಲಿವರಿ ಪಾರ್ಟ್‌ನರ್‌ಗಳು ಪ್ಲಾಟ್‌ಫಾರ್ಮ್ ಕೆಲಸವನ್ನು ಅಗಾಧವಾಗಿ ಆರಿಸಿಕೊಳ್ಳುತ್ತಾರೆ. ಏಕೆಂದರೆ, ಅವರು ಅನೇಕ ಮಾರುಕಟ್ಟೆಗಳಲ್ಲಿ ನಡೆಸಿದ ವಿವಿಧ ಸಮೀಕ್ಷೆಗಳಲ್ಲಿ ಪ್ರತಿಫಲಿಸಿದಂತೆ, ಯಾವಾಗ, ಎಲ್ಲಿ, ಮತ್ತು ಹೇಗೆ ಬೇಕಾದರೂ ಕೆಲಸ ಮಾಡಬಹುದು ಎಂಬ ಅನುಕೂಲವನ್ನು ಅವರು ಗೌರವಿಸುತ್ತಾರೆ.

ಸ್ವತಂತ್ರ ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಅನುಕೂಲ, ನ್ಯಾಯಯುತ ಮತ್ತು ಪಾರದರ್ಶಕ ಗಳಿಕೆಯ ಅವಕಾಶಗಳು, ಸಾಮಾಜಿಕ ರಕ್ಷಣೆ ಮತ್ತು ಪ್ರಯೋಜನಗಳಿಗೆ ಪ್ರವೇಶ, ಅರ್ಥಪೂರ್ಣ ಪ್ರಾತಿನಿಧ್ಯ ಮತ್ತು ಕಲಿಕೆ ಮತ್ತು ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ಗುಣಮಟ್ಟದ ಪ್ಲಾಟ್‌ಫಾರ್ಮ್ ಕೆಲಸಕ್ಕಾಗಿ ನಾವು ಸಲಹೆ ನೀಡುವುದನ್ನು ಮುಂದುವರಿಸುತ್ತೇವೆ.

ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ

Uber ಹೆಚ್ಚು ಸುಸ್ಥಿರ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದೆ. ಏಕೆಂದರೆ, ಇದು ನಮ್ಮ ವ್ಯವಹಾರಕ್ಕೆ, ನಮ್ಮ ಪ್ಲಾಟ್‌ಫಾರ್ಮ್ ಬಳಸುವ ಜನರಿಗೆ, ನಾವು ಕಾರ್ಯನಿರ್ವಹಿಸುವ ನಗರಗಳಿಗೆ ಮತ್ತು ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ಸರಿಯಾದ ಕೆಲಸವಾಗಿದೆ.

ನಮ್ಮ ಪ್ರಗತಿಯ ವೇಗವು ಮುಖ್ಯವಾಗಿ, ನೀತಿ ನಿರೂಪಕರು ಮತ್ತು ವ್ಯಾಪಕ ವಾಹನದ ಉದ್ಯಮದ ಕ್ರಮಗಳು ಸೇರಿದಂತೆ ಅನೇಕ ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ನಾವು ನಮ್ಮ 2025 ಹವಾಮಾನ ಗುರಿಗಳನ್ನು ನಿಗದಿಸಿದಾಗ, ಸುಸ್ಥಿರ ಉದ್ಯಮದಲ್ಲಿ ಹೂಡಿಕೆಯ ಜೊತೆಗೆ ಬಲವಾದ ನಿಯಂತ್ರಕ ಕ್ರಮಗಳು ನಮ್ಮ ಪ್ರಯತ್ನಗಳನ್ನು ಬೆಂಬಲಿಸಲು ಸಹಾಯ ಮಾಡುತ್ತವೆ ಎಂದು ನಾವು ನಿರೀಕ್ಷಿಸಿದ್ದೇವೆ. ಪ್ರಗತಿ ಸಾಧಿಸಲಾಗಿದೆ. ಆದರೆ, ದುರದೃಷ್ಟವಶಾತ್, ಹೆಚ್ಚು ಆಕ್ರಮಣಕಾರಿ ಕ್ರಮವಿಲ್ಲದೆ, ನಮ್ಮ ಎಲ್ಲ 2025 ರ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಈ ಸವಾಲುಗಳ ಹೊರತಾಗಿಯೂ, 2040 ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಪ್ಲಾಟ್‌ಫಾರ್ಮ್ ನಮ್ಮ ಗುರಿಯತ್ತ ನಾವು ದಣಿವಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಹೆಚ್ಚು ತುರ್ತಾದ ಕ್ರಮ ಕೈಗೊಳ್ಳಬೇಕು ಮತ್ತು ನೀತಿ ನಿರೂಪಕರು ಮತ್ತು ವಾಹನ ತಯಾರಕರು ಬಲವಾದ ಕ್ರಮ ಕೈಗೊಳ್ಳಬೇಕು ಎಂದು ನಾವು ಸಲಹೆ ನೀಡುವುದನ್ನು ಮುಂದುವರಿಸುತ್ತೇವೆ.

ನಮ್ಮ ವಾರ್ಷಿಕ ಪರಿಸರ, ಸಾಮಾಜಿಕ ಮತ್ತು ಆಡಳಿತ ವರದಿ ಮತ್ತು ನಮ್ಮ ಆವರ್ತಕ ಹವಾಮಾನ ಮೌಲ್ಯಮಾಪನ ಮತ್ತು ಕಾರ್ಯಕ್ಷಮತೆ ವರದಿಯ ಮೂಲಕ ನಮ್ಮ ಪ್ರಗತಿಯ ವಿಷಯದಲ್ಲಿ ನಾವು ಪಾರದರ್ಶಕವಾಗಿ ಮುಂದುವರಿಯುತ್ತೇವೆ.

ಜನರು ಮತ್ತು ಸಂಸ್ಕೃತಿ

ನಮ್ಮ ಧ್ಯೇಯೋದ್ದೇಶದಿಂದ ಪ್ರೇರಿತರಾದ ಮತ್ತು ಕ್ರಿಯಾಶೀಲರಾದ ವಿವಿಧ ಜನಾಂಗಗಳ ಜನರನ್ನು ನಾವು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಪ್ರಪಂಚದಾದ್ಯಂತ ನಮ್ಮ ಪ್ಲಾಟ್‌ಫಾರ್ಮ್‌ ಬಳಸುವ ಎಲ್ಲರಿಗೂ ಅವರ ಅನುಭವವನ್ನು ಸುಧಾರಿಸಲು ಸಹಾಯ ಮಾಡುವ ಇಚ್ಛೆಯಿರುವ ಸಾಧಕರ ಅಗತ್ಯ ನಮಗಿದೆ. ನಾವು ಎಲ್ಲರಿಗೂ ಸೂಕ್ತ ಆಯ್ಕೆಯಾಗಿರುವುದಿಲ್ಲ ಎಂಬುದು ನಮಗೆ ತಿಳಿದಿದೆ, ಅದಕ್ಕಾಗಿಯೇ ನಾವು ಯಾರೆಂಬುದರ ಬಗ್ಗೆ ಮತ್ತು Uber ನಲ್ಲಿ ಕೆಲಸ ಮಾಡುವುದು ಹೇಗಿರುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾಗಿರಲು ನಾವು ಬದ್ಧರಾಗಿದ್ದೇವೆ.

ಉದ್ಯೋಗಿಗಳಿಗೆ ಹೆಚ್ಚು ಮುಖ್ಯವಾದುದನ್ನು ಅರ್ಥಮಾಡಿಕೊಳ್ಳಲು ಮತ್ತು ಅವರು ಇಲ್ಲಿ ಏಕೆ ಉಳಿಯಬಯಸುತ್ತಾರೆ ಮತ್ತು ಇಲ್ಲಿಯೇ ತಮ್ಮ ವೃತ್ತಿಯಲ್ಲಿ ಉನ್ನತಿ ಸಾಧಿಸಲು ಏಕೆ ಬಯಸುತ್ತಾರೆ ಎಂಬುದನ್ನು ತಿಳಿಯಲು ನಾವು ಅವರಿಂದ ಡೇಟಾವನ್ನು ಸಂಗ್ರಹಿಸುತ್ತಿದ್ದೇವೆ. ನಮ್ಮ ಆದ್ಯತೆಗಳು ಮತ್ತು ವಿಧಾನವನ್ನು ಸ್ಪಷ್ಟಪಡಿಸಲು ನಾವು ಈ ಒಳನೋಟವನ್ನು ಬಳಸುತ್ತಿದ್ದೇವೆ ಮತ್ತು ಇದರ ಪರಿಣಾಮವಾಗಿ ನಾವು 6 ವಿಭಿನ್ನ ಉದ್ಯೋಗಿ ಅಗತ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ: ಹೆಮ್ಮೆ, ನಮ್ಮದೆಂಬ ಭಾವನೆ, ಸಮಾನತೆ, ಬೆಳವಣಿಗೆ, ಸಂಭಾವನೆ, ಯೋಗಕ್ಷೇಮ ಮತ್ತು ನಂಬಿಕೆ. ನಮ್ಮ ವೈವಿಧ್ಯಮಯ ಕಾರ್ಯಪಡೆಯ ಅಗತ್ಯತೆಗಳನ್ನು ನಾವು ಪರಿಗಣಿಸುತ್ತೇವೆ ಮತ್ತು ಈ ಪ್ರತಿಯೊಂದು ನಿರ್ಣಾಯಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ, ಸಮಾನವಾದ ಮತ್ತು ಅಂತರ್ಗತ ಅನುಭವವನ್ನು ರಚಿಸುವುದನ್ನು ಮುಂದುವರಿಸುತ್ತೇವೆ ಎಂಬುದನ್ನು ಈ ಮಾನವ ಬಂಡವಾಳದ ಕಾರ್ಯತಂತ್ರವು ಖಚಿತಪಡಿಸುತ್ತದೆ.

ನಾಗರಿಕ ಹಕ್ಕುಗಳ ವಿಶ್ಲೇಷಣೆ

ಜನರು ಮುಕ್ತವಾಗಿ, ಸಮಾನವಾಗಿ ಮತ್ತು ಸುರಕ್ಷಿತವಾಗಿ ಚಲಿಸಬಹುದೆಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ. ಆ ಗುರಿಯನ್ನು ಬೆಂಬಲಿಸಲು ಮತ್ತು ಷೇರುದಾರರೊಂದಿಗಿನ ತೊಡಗಿಸಿಕೊಳ್ಳುವಿಕೆ ನಂತರ, Uber ನಾಗರಿಕ ಹಕ್ಕುಗಳ ವಿಶ್ಲೇಷಣೆಗೆ ಒಳಗಾಗಿದೆ. ಅಮೆರಿಕದ ಮಾಜಿ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಅವರ ನಿರ್ದೇಶನದ ಮೇರೆಗೆ ಕೋವಿಂಗ್ಟನ್ ಮತ್ತು ಬರ್ಲಿಂಗ್ ಈ ಮೌಲ್ಯಮಾಪನವನ್ನು ನಡೆಸಿದ್ದಾರೆ. ನಾಗರಿಕ ಹಕ್ಕುಗಳನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ನಾವು ಸಮಾನ ಮತ್ತು ಅಂತರ್ಗತ ಪ್ಲಾಟ್‌ಫಾರ್ಮ್ ಆಗಿ ಸುಧಾರಿಸುವುದನ್ನು ಮುಂದುವರಿಸಬಹುದಾದ ಪ್ರದೇಶಗಳನ್ನು ಗುರುತಿಸುವ ಉದ್ದೇಶದಿಂದ US ನಲ್ಲಿನ ರೈಡ್‌ಶೇರ್ ಚಾಲಕರು, ಸಮುದಾಯಗಳು ಮತ್ತು ಉದ್ಯೋಗಿಗಳ ಮೇಲೆ ನಮ್ಮ ಪ್ರಭಾವವನ್ನು ಮೌಲ್ಯಮಾಪನ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಆಡಳಿತ

ನಮ್ಮ ನಿರ್ದೇಶಕರ ಮಂಡಳಿಯು ಅತ್ಯುತ್ತಮ ದರ್ಜೆಯ ಕಾರ್ಪೊರೇಟ್ ಆಡಳಿತ ನೀಡಲು ಬದ್ಧವಾಗಿದೆ ಮತ್ತು ನಮ್ಮ ಸಂಸ್ಕೃತಿ, ಆಡಳಿತ ಹಾಗೂ ಕಾರ್ಪೊರೇಟ್ ಜವಾಬ್ದಾರಿಗೆ ಸಂಬಂಧಿಸಿದಂತೆ ನಮ್ಮ ಷೇರುದಾರರೊಂದಿಗೆ ನಾವು ಪಾರದರ್ಶಕವಾಗಿರಬೇಕು ಮತ್ತು ಜವಾಬ್ದಾರರಾಗಿರಬೇಕು ಎಂದು ದೃಢವಾಗಿ ನಂಬುತ್ತದೆ. ವಿಶ್ವ-ದರ್ಜೆಯ ಸಾರ್ವಜನಿಕ ಕಂಪನಿ ಆಡಳಿತ ರಚನೆಯನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ನಾವು ವೈವಿಧ್ಯಮಯ ಹಿನ್ನೆಲೆಗಳು, ಕೌಶಲ್ಯಗಳು ಮತ್ತು ಅನುಭವಗಳೊಂದಿಗೆ ನಿರ್ದೇಶಕರ ಮಂಡಳಿಯನ್ನು ಬಲಪಡಿಸಿದ್ದೇವೆ ಮತ್ತು ಬೆಳೆಸಿದ್ದೇವೆ.

ನಮ್ಮ ವಸ್ತುಸ್ಥಿತಿಯ ಮೌಲ್ಯಮಾಪನದಲ್ಲಿ ಗುರುತಿಸಲಾದ ESG ವಿಚಾರಗಳು ನಮ್ಮ ವ್ಯವಹಾರ ಮತ್ತು ವ್ಯವಹಾರ ತಂತ್ರಗಾರಿಕೆಯ ದೀರ್ಘಾವಧಿಯ ಯಶಸ್ಸಿಗೆ ಮುಖ್ಯವಾಗಿವೆ. ಅಂತೆಯೇ ಮತ್ತು ಸೂಕ್ತವಾದಂತೆ, ಅವುಗಳನ್ನು Uber ನ ನಿರ್ದೇಶಕರ ಮಂಡಳಿ ಮತ್ತು ಮಂಡಳಿಯ ಸ್ವತಂತ್ರ ಲೆಕ್ಕಪರಿಶೋಧನೆ, ಪರಿಹಾರ ಹಾಗೂ ನಾಮನಿರ್ದೇಶನ ಮತ್ತು ಆಡಳಿತ ಸಮಿತಿಗಳು ಮೇಲ್ವಿಚಾರಣೆ ಮಾಡುತ್ತವೆ.

Uber ನ ESG ವರದಿ ಮಾಡುವಿಕೆಯು ಅಪಾಯಗಳು ಮತ್ತು ಅನಿಶ್ಚಿತತೆಗಳನ್ನು ಒಳಗೊಂಡಿರುವ ನಮ್ಮ ಭವಿಷ್ಯದ ವ್ಯವಹಾರ ನಿರೀಕ್ಷೆಗಳ ಕುರಿತು ಮುಂದಿನ ಹಾದಿಯ ಬಗ್ಗೆ ಹೇಳಿಕೆಗಳನ್ನು ಹೊಂದಿರಬಹುದು. ವಾಸ್ತವಿಕ ಫಲಿತಾಂಶಗಳು ಊಹಿಸಿದ ಫಲಿತಾಂಶಗಳಿಗಿಂತ ಭೌತಿಕವಾಗಿ ಭಿನ್ನವಾಗಿರಬಹುದು ಮತ್ತು ವರದಿ ಮಾಡಿದ ಫಲಿತಾಂಶಗಳನ್ನು ಭವಿಷ್ಯದ ಕಾರ್ಯನಿರ್ವಹಣೆಯ ಸೂಚಕ ಎಂದು ಪರಿಗಣಿಸಬಾರದು. ಇ‌ನ್ನಷ್ಟು ವಿವರಗಳಿಗಾಗಿ ನಮ್ಮ 2024 ESG ವರದಿ ನೋಡಿ.

Uber ನ ESG ವರದಿಯಲ್ಲಿನ

ಹಸಿರುಮನೆ ಅನಿಲ ಹೊರಸೂಸುವಿಕೆಗಳ ಡೇಟಾವನ್ನು LRQA ಪರಿಶೀಲಿಸಿದೆ. LRQA ಪರಿಶೀಲನೆ ಹೇಳಿಕೆಯನ್ನು ಇಲ್ಲಿನೋಡಬಹುದು.

Uber ನ ಇಂಗಾಲದ ಆಫ್‌ಸೆಟ್‌ಗಳ ಬಳಕೆಯ ಅವಲೋಕನವನ್ನು ಇಲ್ಲಿ ನೋಡಬಹುದು

ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ
বাংলাEnglishहिन्दीಕನ್ನಡमराठीதமிழ்తెలుగుاردو